Advertisement

ಅವಳಿಗಳ ಅಂಕದಲ್ಲೂ ಹೋಲಿಕೆ!

09:37 AM May 21, 2018 | Harsha Rao |

ಹೊಸದಿಲ್ಲಿ: ಅವಳಿಗಳು ನೋಡುವುದಕ್ಕೆ ಒಂದೇ ರೀತಿ ಇರುವುದು ಗೊತ್ತು. ಆದರೆ ಅವರ ಮಾರ್ಕ್ಸ್ ಕಾರ್ಡ್‌ನಲ್ಲಿನ ಅಂಕಗಳೂ ಒಂದೇ ರೀತಿ ಇದ್ದರೆ! ಇಂಥದ್ದೊಂದು ವಿಚಿತ್ರ ಈ ಬಾರಿ ಐಸಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ನಡೆದಿದೆ. ಮುಂಬೈನ ಜಶೋ ದಾಬೆನ್‌ ಎಂಎಲ್‌ ಸ್ಕೂಲ್‌ನಲ್ಲಿ ಓದುತ್ತಿರುವ ರೋಹನ್‌ ಮತ್ತು ರಾಹುಲ್‌ ಚೆಂಬಕಸೆರಿಲ್‌ ಇಬ್ಬರೂ ಶೇ. 96.5 ಅಂಕ ಪಡೆದಿದ್ದಾರೆ.

Advertisement

ಇಬ್ಬರೂ ಒಂದೇ ರೀತಿಯ ಹವ್ಯಾಸವನ್ನೂ ಹೊಂದಿದ್ದಾರೆ. ಆದರೆ ಒಂದೇ ಅಂಕವನ್ನು ಪಡೆದಿದ್ದೂ ಅಚ್ಚರಿ ಎಂದು ರಾಹುಲ್‌ ಹಾಗೂ ರೋಹನ್‌ ತಾಯಿ ಸೋನಲ್‌ ಹೇಳಿದ್ದಾರೆ. ಕಳೆದ ವಾರ ಕೌನ್ಸಿಲ್‌ ಆಫ್ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾ ಮಿನೇಷನ್‌ (ಸಿಐಎಸ್‌ಸಿಇ) ಕಳೆದ ವಾರ 12ನೇ ತರಗತಿ ಫ‌ಲಿತಾಂಶ ಪ್ರಕಟ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next