“ಚೆನ್ನೈ ತಂಡದ ಎರಡು ವರ್ಷದ ನಿಷೇಧ ಅದರ ವರ್ಚಸ್ಸು ಹೆಚ್ಚಿಸಲಿದೆ.
Advertisement
1958ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ವಿಮಾನಾಪಘಾತಕ್ಕೊಳಗಾಗಿತ್ತು. ಅನಂತರ ಆ ತಂಡದ ವರ್ಚಸ್ಸು ಹೆಚ್ಚಿದಂತೆಯೇ ಇದೂ ಕೂಡ’ ಎಂದು ಅಶ್ವಿನ್ ವರ್ಣಿಸಿದ್ದರು. ಭ್ರಷ್ಟಾಚಾರದಿಂದ ನಿಷೇಧಕ್ಕೊಳಗಾದ ಚೆನ್ನೈಗೂ,ವಿಮಾನಾಪಘಾತದಿಂದ ವಿರಾಮ ತೆಗೆದುಕೊಂಡಿದ್ದ ಮ್ಯಾಂಚೆಸ್ಟರ್ ಯುನೈಟೆಡ್‌ಗೂ ಹೋಲಿಸಿದ್ದು ಅಭಿಮಾನಿಗಳಿಗೆ ಸರಿಕಂಡಿಲ್ಲ. ಅದನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಅಶ್ವಿನ್ ಕ್ಷಮೆ ಕೇಳುವುದರೊಂದಿಗೆ ಒಂದುಹಂತಕ್ಕೆ ವಿಷಯ ಇತ್ಯರ್ಥವಾಗಿದೆ.