ಚೆನ್ನೈ: ವಾಹನ ತಯಾರಿಕಾ ರಂಗದ ಅಗ್ರಗಣ್ಯ ಸಂಸ್ಥೆ ಟಾಟಾ ಮೋಟರ್, ಭಾರತೀಯ ಮಾರುಕಟ್ಟೆಗೆ ದೇಶದ ಮೊದಲ ಕಾಂಪ್ಯಾಕ್ಟ್ ಟ್ರಕ್ ‘ಟಾಟಾ ಇಂಟ್ರಾ’ ಪರಿಚಯಿಸಿದೆ. ಹಳೆಯ ಟಾಟಾ ‘ಏಸ್’ಗಿಂತಲೂ ಬಲಿಷ್ಠವಾಗಿರುವ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಆಧುನಿಕತೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ.
ಭಾರತೀಯ ಮಾರುಕಟ್ಟೆಗೆ 2005ರಲ್ಲಿ ಟಾಟಾ ಮೋಟರ್ ಟಾಟಾ ಏಸ್‌ನ್ನು ಪರಿಚಯಿಸಿತ್ತು. ಅದರ ಉನ್ನತೀಕರಣಗೊಳಿಸಿದ ವಾಹನವಾಗಿ ಸಂಸ್ಥೆ ಇದೀಗ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಟಾಟಾ ಸಂಸ್ಥೆಯು ಇಂಟ್ರಾ ವಿ 10 ಹಾಗೂ ಇಂಟ್ರಾ ವಿ20 ಅವತರಣಿಕೆಯಲ್ಲಿ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇಂಟ್ರಾ ವಿ10 ಹಾಗೂ ವಿ20 ಟ್ರಕ್‌ಗಳು ಅತಿ ವೇಗವಾಗಿ ಚಲಿಸುವ ಹಾಗೂ ಗುಡ್ಡ ಪ್ರದೇಶಗಳಲ್ಲೂ ಸುಲಲಿತವಾಗಿ ಚಲಿಸುವಂತಹ ಸಾಮರ್ಥಯ ಹೊಂದಿವೆ. ಅದರಲ್ಲಿಯೂ ವಿಶೇಷವಾಗಿ ಇಂಟ್ರಾ ವಿ10 ಟ್ರಕ್‌ಗಳನ್ನು ನಗರದ ಭಾಗಗಳು ಹಾಗೂ ಕಡಿಮೆ ಅಂತರದ ಪ್ರದೇಶಗಳಲ್ಲಿ ಹೆಚ್ಚಿನ ಟ್ರಿಪ್‌ಗ್ಳಿಗೆ ಬಳಸಲು ವಿನ್ಯಾಸಗೊಳಿಸಿದ್ದು, ವಿ20 ಟ್ರಕ್‌ಗಳನ್ನು ದೂರ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ.
ವಾಹನ ಬಿಡುಗಡೆಗೊಳಿಸಿ ಮಾತನಾಡಿದ ಟಾಟಾ ಮೋಟರ್ ಲಿಮಿಟೆಡ್‌ನ ಸಿವಿಬಿಯು ವಿಭಾಗದ ಅಧ್ಯಕ್ಷ ಗಿರೀಶ್ ವಾಘ್, ದೇಶದಾದ್ಯಂತ ಟಾಟಾ ಏಸ್‌ಗೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ಸಂಸ್ಥೆ ಏಸ್‌ನಲ್ಲಿರುವ ನ್ಯೂನ್ಯತೆಗಳು ಹಾಗೂ ಲೋಪಗಳ ಕುರಿತು ತಿಳಿಸಲು ಚಾಲಕ ಸಲಹೆಗಳನ್ನು ಸಂಗ್ರಹಿಸಿದ್ದು, ಅದರ ಆಧಾರದ ಮೇಲೆ ಟಾಟಾ ಇಂಟ್ರಾ ಟ್ರಕ್‌ಗಳನ್ನು ತಯಾರಿಸಲಾಗಿದೆ ಎಂದರು.ಟಾಟಾ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳು ಭಾರತ ಸ್ಟೇಜ್ (ಬಿಎಸ್-6) ಎಂಜಿನ್ ಹೊಂದಿದ್ದು, ಇಂಟ್ರಾ ವಿ20 1.4 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಹಾಗೂ 1396 ಸಿಸಿ ಸಾಮರ್ಥಯದ ಇಂಜಿನ್ ಹೊಂದಿದೆ. ಜತೆಗೆ, ಜಿಬಿಎಸ್ 65 ಮೆಕ್ಯಾನಿಕಲ್ ಶಿಫ್ಟ್ ಗೇರ್ ಬಾಕ್ಸ್ ಇದ್ದು, 5 ಸ್ಪೀಡ್ ಮ್ಯಾನ್ಯುಯೇಲ್ ಗೇರ್ ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು ವಿ10 ಟ್ರಕ್ 798 ಸಿಸಿ ಡಿಐ ಇಂಜಿನ್ ಹೊಂದಿದ್ದು, 1000 ಕೆ.ಜಿ.ಯನ್ನು ಹೊರುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.
‘ಸಂಪೂರ್ಣ ಸೇವಾ’ ಲಭ್ಯ: ಸಂಸ್ಥೆಯಿಂದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ‘ಸಂಪೂರ್ಣ ಸೇವಾ’ ಕಾರ್ಯಕ್ರಮದಡಿಯಲ್ಲಿ 24×7 ಸೇವೆ ಲಭ್ಯವಾಗುತ್ತದೆ. ಅದರಂತೆ ಯಾವುದೇ ಭಾಗದಲ್ಲಿ ವಾಹನ ಕೆಟ್ಟು ನಿಂತರೆ ಸಂಸ್ಥೆಯ ಪ್ರತಿನಿಧಿಗಳು ನೆರವಿಗೆ ಬರಲಿದ್ದು, ಎರಡು ವರ್ಷಗಳು ಅಥವಾ 72,000 ಕಿ.ಮೀ.ಸಂಚರಿಸುವವರೆಗೆ ವಾರೆಂಟಿ ನೀಡಲಾಗುತ್ತದೆ.
Advertisement
ಎರಡು ಮಾದರಿಯ ಇಂಟ್ರಾ ವಾಹನಗಳು ಬುಧವಾರದಿಂದಲೇ ಎಲ್ಲ ರಾಜ್ಯಗಳ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಿದ್ದು, ಸಂಸ್ಥೆಯ ಟಾಟಾ ಏಸ್ ವಾಹನಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ. ಮೇ 22ರಂದು ಚೆನ್ನೈನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗುಂಟೆರ್ ಬಟೆಶೆಕ್ ಹಾಗೂ ಟಾಟಾ ಮೋಟರ್ ಲಿಮಿಟೆಡ್‌ನ ಸಿವಿಬಿಯು ವಿಭಾಗದ ಅಧ್ಯಕ್ಷ ಗಿರೀಶ್ ವಾಘ್ ಅವರು ಹೊಸ ‘ಟಾಟಾ ಇಂಟ್ರಾ’ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಅನಾವರಣಗೊಳಿಸಿದರು.
Related Articles
ವಾಹನದ ವಿಶೇಷತೆಗಳು
ಪವರ್ ಸ್ಟೈರಿಂಗ್ – ವಿಸ್ತಾರವಾದ ಕ್ಯಾಬಿನ್-ಎಮರ್ಜೆನ್ಸಿ ಲಾಕಿಂಗ್ ರಿಯಾಕ್ಟರ್ ಒಳಗೊಂಡ ಸೀಟ್ಬೆಲ್r-ಕಡಿಮೆ ಶಬ್ದ ಮಾಡುವ ಎಂಜಿನ್ -ಆರಾಮದಾಯಕ ಆಸನ ವ್ಯವಸ್ಥೆ-ಮೊಬೈಲ್ ಚಾರ್ಜಿಂಗ್ ಪಾಯಿಂಗ್-ಫ್ರೀ ಫಿಟ್ಟೆಡ್ ಮ್ಯೂಸಿಕ್ ಸಿಸ್ಟಂ-ಹವಾನಿಯಂತ್ರಿತ ವ್ಯವಸ್ಥೆ – ಎಲ್ಇಡಿ ಲ್ಯಾಂಪ್‌ಗ್ಳ ಅಳವಡಿಕೆ.
ಭಾರತದ ಸಣ್ಣ ವಾಣಿಜ್ಯ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಟಾಟಾ ಸಂಸ್ಥೆ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್ ಪರಿಚಯಿಸಿದ್ದು, ಹೆಚ್ಚಿನ ಗ್ರಾಹಕರಿಗೆ ಇದು ಅನುಕೂಲವಾಗಲಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ವಾಹನವನ್ನು ವಿನ್ಯಾಸಗೊಳಿಸಲಾಗಿದ್ದು, ಇಂಟ್ರಾ ವಿ10 ಟ್ರಕ್ 5.35 ಲಕ್ಷ ರೂ. ಹಾಗೂ ಇಂಟ್ರಾ ವಿ20 ಟ್ರಕ್ 5.85 ಲಕ್ಷ ರೂ.ಗಳಿಂದ ಲಭ್ಯವಾಗಲಿದೆ. ವಿದೇಶಿ ಮಾರುಕಟ್ಟೆಯಲ್ಲಿ ಇದನ್ನು ಪರಿಚಯಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
– ಗುಂಟೆರ್ ಬಟೆಶೆಕ್, ಸಿಇಒ ಟಾಟಾ ಮೋಟರ್.
– ಗುಂಟೆರ್ ಬಟೆಶೆಕ್, ಸಿಇಒ ಟಾಟಾ ಮೋಟರ್.
-ವೆಂ.ಸುನೀಲ್ಕುಮಾರ್
Advertisement