Advertisement

ಜಾಗತೀಕರಣದಿಂದ ಸಂಕಷ್ಟದಲ್ಲಿ ಸಮುದಾಯ

12:04 PM Dec 28, 2017 | Team Udayavani |

ಕೆಂಗೇರಿ: ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಆರ್ಯವೈಶ್ಯ ಸಮುದಾಯ ಇಂದು ಜಾಗತೀಕರಣ, ಉದಾರೀಕರಣದ ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಜೀವನ ಉತ್ತಮವಾಗಲು ಮೀಸಲಾತಿ ಅಗತ್ಯವಿದೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷ ಟಿ.ಎ.ಶರವಣ ಅಭಿಪ್ರಾಯಪಟ್ಟರು. ಆರ್ಯವೈಶ್ಯ ಮಂಡಳಿಯಿಂದ ಗಂಗೊಂಡನಹಳ್ಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತ ನಾಡಿದರು.

Advertisement

ಫೆ.18ರಂದು ಜಾಗೃತಿ ಸಮಾವೇಶ: ಆರ್ಯವೈಶ್ಯ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಫೆ.18 ರಂದು ಅರಮನೆ ಮೈದಾನದಲ್ಲಿ ಆರ್ಯವೈಶ್ಯ ಸಮುದಾಯದ ಹಕ್ಕುಗಳಿಗಾಗಿ ಒತ್ತಾಯಿಸಿ ಬೃಹತ್‌ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದ ಮೂಲಕ ಸರ್ಕಾರಕ್ಕೆ ವಸ್ತುಸ್ಥಿತಿ ಹಾಗೂ ವಾಸ್ತವದ ಅರಿವು ಮೂಡಿಸಲಾಗುತ್ತದೆ ಎಂದು ಶರವಣ ತಿಳಿಸಿದರು. 

ಕರ್ನಾಟಕ ಆರ್ಯವೈಶ್ಯ ಮಹಾ ಮಂಡಳಿ ಉಪಾಧ್ಯಕ್ಷ ಆದಿಶೇಷಯ್ಯ, ಸಂಘಟನಾ ಕಾರ್ಯದರ್ಶಿ ಡಿ.ಡಿ. ಪ್ರಹ್ಲಾದ್‌, ವಕ್ತಾರ ಕೆ.ವಿ.ಆದಿಶೇಷಯ್ಯ, ಮುಖಂಡರಾದ ವೇಣುಗೋಪಾಲ್‌, ಅಮರ್‌ನಾಥ್‌, ಸಿ.ರತ್ನಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next