Advertisement

Mangaluru ರಚನಾದಿಂದ ಸಮುದಾಯ ಪ್ರಗತಿಯ ಕಾರ್ಯ: | ಡಾ| ಪೀಟರ್‌ ಮಚಾದೊ

12:28 AM Nov 04, 2024 | Team Udayavani |

ಮಂಗಳೂರು: ಸಮಾಜದ ವಿವಿಧ ವರ್ಗದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ರಚನಾ ಸಂಸ್ಥೆ ಶ್ರಮಿಸುತ್ತಿದೆ. ಅನೇಕರ ಬಾಳು ಬೆಳಗುವಲ್ಲಿ ಈ ಸಂಸ್ಥೆ ನೆರವಾಗಿದೆ. ಮಾತು ಕಡಿಮೆ ಕೆಲಸ ಜಾಸ್ತಿ ಎಂಬಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಬೆಂಗಳೂರಿನ ಆರ್ಚ್‌ ಬಿಷಪ್‌ ಅ| ವಂ| ಡಾ| ಪೀಟರ್‌ ಮಚಾದೊ ಹೇಳಿದರು.

Advertisement

ಮಂಗಳೂರಿನ ಕುಲಶೇಖರದ ಕೊರ್ಡೆಲ್‌ ಸಭಾಂಗಣದಲ್ಲಿ ರವಿವಾರ ನಡೆದ ಕೊಂಕಣಿ ಕೆಥೋಲಿಕ್‌ ಉದ್ಯಮಿಗಳ, ವೃತ್ತಿಪರರ ಮತ್ತು ಕೃಷಿಕರ ಸಂಸ್ಥೆ “ರಚನಾ’ದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪುಣೆಯ ಮಿಲಿಟರಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಕಮಾಂಡೆಂಟ್‌ ರಿಯರ್‌ ಅಡ್ಮಿರಲ್‌ ನೆಲ್ಸನ್‌ ಡಿ’ಸೋಜಾ ಮಾತನಾಡಿ, ರಚನಾ ಸಂಸ್ಥೆ ಉದ್ಯಮದ ಜತೆಗೆ ಉದ್ಯಮಶೀಲತ್ವವನ್ನು ಬೆಳೆಸುವ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಕಳೆದ 25 ವರ್ಷಗಳಲ್ಲಿ ಅನೇಕರನ್ನು ಸ್ವಾವಲಂಬಿಗಳನ್ನಾಗಿಸಿದ್ದು, ಇದು ಮತ್ತಷ್ಟು ಮುಂದುವರಿಯುವಂತಾಗಬೇಕು ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ| ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿದ್ದರು.

ರಚನಾ ಸಂಸ್ಥೆ ಪ್ರಾರಂಭಿಸಲು ಕಾರಣಕರ್ತರಾದ ಮಾರಿಟ್ಟೊ ಸಿಕ್ವೇರಾ ಅವರನ್ನು ಸಮ್ಮಾನಿಸಲಾಯಿತು.
ಎನ್‌ಆರ್‌ಐ ಉದ್ಯಮಿ ಮೈಕಲ್‌ ಡಿ’ಸೋಜಾ, ಮಾಜಿ ಶಾಸಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಜೆ. ಆರ್‌. ಲೋಬೊ, ರಾಯ್‌ ಕ್ಯಾಸ್ತಲಿನೊ, ಸಂಚಾಲಕಿ ಮಾಜೊರಿ ಟೆಕ್ಸೇರಾ, ರಚನಾ ಅಧ್ಯಕ್ಷ ಅಧ್ಯಕ್ಷ ಜಾನ್‌ ಮೊಂತೆರೊ, ಕಾರ್ಯದರ್ಶಿ ವಿಜಯ್‌ ವಿಶ್ವಾಸ್‌ ಲೋಬೊ, ಕೋಶಾಧಿಕಾರಿ ನೆಲ್ಸನ್‌ ಮೊಂತೇರೊ, ಕಾರ್ಯದರ್ಶಿ ವಿಜಯ್‌ ವಿಶ್ವಾಸ್‌ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

25 ವರ್ಷಗಳ ಸವಿನೆನಪಿಗಾಗಿ ಕೊಂಕಣಿ ಕ್ರೈಸ್ತ ಸಮುದಾಯ ಯುವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಚನಾ ಕೆಥೋಲಿಕ್‌ ಸೌಹಾರ್ದ ಸಹಕಾರಿ ಸಂಘ ಯೋಜನೆಯ ಉದ್ಘಾಟನೆ ನಡೆಯಿತು. ರಚನಾ ಸ್ಥಾಪನೆ ಮತ್ತು ನಡೆದು ಬಂದ ಹಾದಿಯ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next