ಕಾಪು: ಕಾಪು ಪಡುಗ್ರಾಮ ದೀಪಸ್ತಂಭದ ಬಳಿಯ ಕೋಟ್ಯಾನ್‌ಕಾರ್ ಮೂಲಸ್ಥಾನದಲ್ಲಿ ಸುಮಾರು 2.13 ಕೋ.ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಮುದಾಯ ಭವನ ಮತ್ತು ಭೋಜನ ಶಾಲೆಯನ್ನು ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಮತ್ತು ಶಾಲಿನಿ ಜಿ. ಶಂಕರ್ ಅಂಬಲಪಾಡಿ ಅವರು ಶನಿವಾರದಂದು ಉದ್ಘಾಟಿಸಿದರು.
ಸಭಾಭವನ ಉದ್ಘಾಟಿಸಿದ ನಾಡೋಜ ಡಾ| ಜಿ. ಶಂಕರ್ ಮಾತನಾಡಿ, ಕೋಟ್ಯಾನ್‌ಕಾರ್ ಮೂಲಸ್ಥಾನದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದರಲ್ಲಿ ಕುಟುಂಬಿಕರೆಲ್ಲರ ಶ್ರಮ ಶ್ಲಾಘನೀಯವಾಗಿದೆ ಎಂದರು.
ಕಾಪು ಕೋಟ್ಯಾನ್‌ಕಾರ್ ಮೂಲ ಸ್ಥಾನದ ಅಧ್ಯಕ್ಷ ದೇಜಪ್ಪ ಕೋಟ್ಯಾನ್ ಕಿದಿಯೂರು ಅಧ್ಯಕ್ಷತೆ ವಹಿಸಿದ್ದರು.ಶಾಸಕ ಲಾಲಾಜಿ ಆರ್. ಮೆಂಡನ್, ಪಡುಬಿದ್ರಿಬೀಡು ರತ್ನಾಕರ ರಾಜ್ ಅರಸರು, ಕೋಟ್ಯಾನ್‌ಕಾರ್ ಮೂಲ ಸ್ಥಾನ ಮುಂಬಯಿ ಸಭಾದ ಅಧ್ಯಕ್ಷ ಕೃಷ್ಣ ಎಂ. ಕೋಟ್ಯಾನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಾಜಿ ಶಾಸಕ ಯು. ಆರ್. ಸಭಾಪತಿ, ಉದ್ಯಮಿಗಳಾದ ಅಪ್ಪು ಕೋಟ್ಯಾನ್ ಶಿವಮೊಗ್ಗ, ಹರಿಯಪ್ಪ ಕೋಟ್ಯಾನ್ ಮಲ್ಪೆ, ನಾಟಿ ವೈದ್ಯ ಶ್ರೀನಿವಾಸ ಪೂಜಾರಿ ನಿಟ್ಟೂರು, ಪುರಸಭಾ ಸದಸ್ಯೆ ಮಮತಾ ಕುಶ ಸಾಲ್ಯಾನ್, ಕಟ್ಟಡ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಂದರ ಸಿ. ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.
ನಾಡೋಜ ಡಾ| ಜಿ. ಶಂಕರ್ ದಂಪತಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸುಂದರ ಸಿ. ಕೋಟ್ಯಾನ್ ಸಹಿತ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳು, ಮೂಲಸ್ಥಾನದ ಕುಟುಂಬಿ ಕರು ಮತ್ತು ಗಣ್ಯರನ್ನು ಸಮ್ಮಾನಿಸಿ, ಅಭಿನಂದಿಸಲಾಯಿತು. ವೇ| ಮೂ| ರಾಘವೇಂದ್ರ ಭಟ್ ಉಚ್ಚಿಲ ಅವರು ನೂತನ ಕಟ್ಟಡದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
ಕಾಪು ಕೋಟ್ಯಾನ್‌ಕಾರ್ ಮೂಲ ಸ್ಥಾನದ ಗೌ| ಕಾರ್ಯದರ್ಶಿ ಗೋವರ್ಧನ್ ಕೋಟ್ಯಾನ್ ಹೆಜಮಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಸುಧರ್ಮ ಕೋಟ್ಯಾನ್ ಉದ್ಯಾವರ ಪ್ರಸ್ತಾವನೆಗೈದರು. ಜನಾರ್ದನ ಕೋಟ್ಯಾನ್ ಆದಿಉಡುಪಿ ವಂದಿಸಿದರು.