Advertisement

“ಬೋಟ್‌ಗಳಿಗೆ ಸಂವಹನ ಸಂಪರ್ಕ ಸಾಧನ ಕಡ್ಡಾಯ’

12:46 AM Sep 28, 2021 | Team Udayavani |

ಮಂಗಳೂರು: ಯಾಂತ್ರೀಕೃತ ಮೀನುಗಾರಿಕೆಗೆ ತೆರಳುವ ಬೋಟು ಗಳಲ್ಲಿ ದ್ವಿಮುಖ ಸಂವಹನ ಸಂಪರ್ಕ ಸಾಧನ ಅಳವಡಿಸುವುದನ್ನು ಕಡ್ಡಾಯ ಗೊಳಿಸಲಾಗುವುದು. ಅಗತ್ಯವಿರುವ ಬ್ಯಾಟರಿಯನ್ನು ಸೋಲಾರ್‌ ಮೂಲಕ ರಿಚಾರ್ಜ್‌ ಮಾಡಿಕೊಳ್ಳುವ ಸಾಧ್ಯತೆ ಗಳ ಕುರಿತು ಪರಿಶೀಲಿಸುವಂತೆ ಮೀನು ಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಅವರು ಸೂಚಿಸಿದ್ದಾರೆ.

Advertisement

ಬೋಟ್‌ಗಳಲ್ಲಿ ಸಂಪರ್ಕ ಸಾಧನ ಗಳನ್ನು ಅಳವಡಿಸುವ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮೀನುಗಾರರ ಸುರಕ್ಷೆ ಸರಕಾರದ ಆದ್ಯತೆ. ಸಮುದ್ರದ ಬಹುದೂರ ಹೋಗಿ ಮೀನುಗಾರಿಕೆ ಮಾಡುವವರ ಬೋಟುಗಳ ಸ್ಥಿತಿಗತಿಗಳನ್ನು ಅವಲೋಕಿ ಸಲು ಹಾಗೂ ಮೀನುಗಾರರ ಸುರಕ್ಷೆ ದೃಷ್ಟಿಯಿಂದ ದ್ವಿಮುಖ ಸಂವಹನ ಸಂಪರ್ಕ ಸಾಧನವನ್ನು ಕಡ್ಡಾಯಗೊಳಿಸ ಲಾಗಿದೆ. ಆದರೆ ಈ ಸಾಧನದಲ್ಲಿರುವ ಬ್ಯಾಟರಿಗಳ ಚಾರ್ಜ್‌ ಖಾಲಿಯಾದಲ್ಲಿ ಬೋಟುಗಳಲ್ಲಿಯೇ ಸೋಲಾರ್‌ ಮೂಲಕ ರಿಚಾರ್ಜ್‌ ಸಾಧ್ಯವಾಗು ವಂತಹ ಯತ್ನಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಇದನ್ನೂ ಓದಿ:ದೇವಾಲಯ ತೆರವು: ನಂಜನಗೂಡು ತಹಶೀಲ್ದಾರ್ ಮೊಹನ ಕುಮಾರಿಗೆ ತಲೆ ದಂಡ

ಉಪ್ಪು ನೀರಿನಲ್ಲಿ ಸೋಲಾರ್‌ ಪ್ಯಾನಲ್‌ಗ‌ಳು ಸೂಕ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ, ಬಾಳಿಕೆಯೂ ಬರುವುದಿಲ್ಲ ಹಾಗಾಗಿ ಪರ್ಯಾಯ ಕ್ರಮಗಳನ್ನು ಶೋಧಿಸಲು ಚಿಂತಿಸಲಾ ಗಿದೆ. ಬೋಟ್‌ಗಳ ಮೇಲೆಯೆ ಕವಚ ದಂತಹ ಸೋಲಾರ್‌ ಫಲಕಗಳನ್ನು ಅಳವಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. ಈ ಸಾಧನ ಗಳಲ್ಲಿ ಕಂಡುಬಂದಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ತಜ್ಞರ ಸಮಿತಿ ರಚಿಸಿಕೊಂಡು, ಅವುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೀನುಗಾರ ಸ್ನೇಹಿಯನ್ನಾಗಿಸಲಾಗು ವುದು ಎಂದರು.

Advertisement

ಡೀಸೆಲ್‌ ಸಬ್ಸಿಡಿ ವಿಸ್ತರಣೆ
ಸ್ಕೈಲೋ ಅಥವಾ ಇಸ್ರೋ ಆಗಲಿ ಯಾವುದೇ ಸಂಸ್ಥೆ ತಯಾರಿಸಿದ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆ ಗ್ಯಾರಂಟಿ ಇರಬೇಕು. ಆ ಯಂತ್ರದ ಸರ್ವಿಸ್‌ ಮಾಡಿಕೊಡುವ ಬಗ್ಗೆಯೂ ಖಚಿತತೆ ಇರಬೇಕು. ಮೀನುಗಾರರಿಗೆ ಇದೀಗ 1.12 ಲಕ್ಷ ಕೆ.ಎಲ್‌. ಡೀಸೆಲ್‌ ಸಬ್ಸಿಡಿ ಈಗಾಗಲೇ ನೀಡಲಾಗುತ್ತಿದೆ. ಅದನ್ನು 1.50 ಲಕ್ಷ ಕೆ.ಎಲ್‌.ಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಗುರುವಾರ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕರಾದ ವೇದವ್ಯಾಸ ಕಾಮತ್‌, ರಘುಪತಿ ಭಟ್‌, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಕರಾವಳಿ ಕಾವಲು ಪಡೆಯ ಡಿಐಜಿ ವೆಂಕಟೇಶ್‌, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಮೀನುಗಾರರ ಮುಖಂಡರಾದ ಡಾ| ಜಿ. ಶಂಕರ್‌, ಮೀನುಗಾರಿಕಾ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್‌ ಕುಮಾರ್‌, ಉಡುಪಿ ಜಿಲ್ಲೆಯ ಜಂಟಿ ನಿರ್ದೇಶಕ ಗಣೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next