Advertisement

ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌: ಭಾರತದಿಂದ ಗೋಲ್ಡನ್‌ ಸ್ವೀಪ್‌

01:15 AM Jul 23, 2019 | Sriram |

ಕಟಕ್‌: 21ನೇ ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ “ಗೋಲ್ಡನ್‌ ಸ್ವೀಪ್‌’ ಪೂರ್ತಿಗೊಳಿಸಿದೆ. ಎಲ್ಲ 7 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.

Advertisement

ಸೋಮವಾರ ಹರ್ಮೀತ್‌ ದೇಸಾಯಿ ಮತ್ತು ಐಹಿಕಾ ಮುಖರ್ಜಿ ಕ್ರಮವಾಗಿ ಪುರುಷರ ಹಾಗೂ ವನಿತೆಯರ ಸಿಂಗಲ್ಸ್‌ ಪ್ರಶಸ್ತಿ ಜಯಿಸುವುದರೊಂದಿಗೆ ಭಾರತ ಈ ಸಾಧನೆಗೈದಿತು. ಫೈನಲಿಸ್ಟ್‌ಗಳೆಲ್ಲ ಭಾರತೀಯರೇ ಆಗಿದ್ದುದು ವಿಶೇಷ. 26ರ ಹರೆಯದ ಹರ್ಮೀತ್‌ ದೇಸಾಯಿ ತಮ್ಮದೇ ದೇಶದ ನೆಚ್ಚಿನ ಆಟಗಾರ ಜಿ. ಸಥಿಯನ್‌ ವಿರುದ್ಧ ಭಾರೀ ಹೋರಾಟ ನಡೆಸಿ 4-3 ಅಂತರದ ಗೆಲುವು ದಾಖಲಿಸಿದರು. 0-2 ಹಿನ್ನಡೆ ಬಳಿಕ ಹರ್ಮೀತ್‌ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು.

ಇದಕ್ಕೂ ಮುನ್ನ ಪುರುಷರ ಡಬಲ್ಸ್‌ ವಿಭಾಗದಲ್ಲಿ ಆ್ಯಂಟನಿ ಅಮಲ್‌ರಾಜ್‌-ಮಾನವ್‌ ಠಕ್ಕರ್‌ ಬಂಗಾರವನ್ನು ಬೇಟೆಯಾಡಿದ್ದರು. ಆಲ್‌ ಇಂಡಿಯನ್‌ ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಜಿ. ಸಥಿಯನ್‌-ಅಚಂತ ಶರತ್‌ ಕಮಲ್‌ ವಿರುದ್ಧ 3-1 ಅಂತರದ ಜಯ ಒಲಿಸಿಕೊಂಡರು.

ವನಿತಾ ಸಿಂಗಲ್ಸ್‌ನಲ್ಲಿ ಐಹಿಕಾ ಮುಖರ್ಜಿ ಮಾಜಿ ರಾಷ್ಟ್ರೀಯ ಚಾಂಪಿಯನ್‌ ಮಧುರಿಕಾ ಪಾಟ್ಕರ್‌ ಅವರನ್ನು 4-0 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಈ ಕೂಟದಲ್ಲಿ ಐಹಿಕಾ ಪಾಲಾದ ಮೊದಲ ಚಿನ್ನದ ಪದಕ. ವನಿತಾ ಡಬಲ್ಸ್‌ ಚಿನ್ನ ಪೂಜಾ ಸಹಸ್ರಬುಢೆ-ಕೃತ್ವಿಕಾ ಸಿನ್ಹಾ ರಾಯ್‌ ಪಾಲಾಯಿತು. ಭಾರತ ಒಟ್ಟು 7 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದು ಅಗ್ರಸ್ಥಾನ ಅಲಂಕರಿಸಿದೆ. ಇಂಗ್ಲೆಂಡ್‌ ದ್ವಿತೀಯ (2 ಬೆಳ್ಳಿ, 3 ಕಂಚು), ಸಿಂಗಾಪುರ ತೃತೀಯ (6 ಕಂಚು) ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next