Advertisement

ಪೂನಂ ಯಾದವ್‌ ಮೇಲೆ ಹಲ್ಲೆ

07:45 AM Apr 16, 2018 | |

ವಾರಣಾಸಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆದ್ದ ವೇಟ್‌ಲಿಫ್ಟರ್‌ ಪೂನಂ ಯಾದವ್‌ ಅವರ ಮೇಲೆ ವಾರಣಾಸಿಯಲ್ಲಿ ಹಲ್ಲೆ ನಡೆಸಲಾಗಿದೆ. ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ವೇಳೆ ಪೂನಂ ಮೇಲೆ ಅಪರಿಚಿತರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆಯುವ ಮೂಲಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೂನಂ ಮೇಲೆ ಹಲ್ಲೆ ನಡೆಯುತ್ತಿದ್ದಾಗ ತಡೆಯಲು ಮಧ್ಯ ಪ್ರವೇಶಿಸಿದ ಪೂನಂ ತಂದೆ, ಚಿಕ್ಕಪ್ಪ, ಸಹೋದರನ ಮೇಲೂ ಹಲ್ಲೆ ಮಾಡಲಾಗಿದೆ. 

ಪೊಲೀಸ್‌ ಮಾಹಿತಿ ಪ್ರಕಾರ, ಜಾಗಕ್ಕೆ ಸಂಬಂಧಿಸಿ ಪೂನಂ ಸಂಬಂಧಿಕರ ಮತ್ತು ನೆರೆಯ ಹಳ್ಳಿ ಮುಖ್ಯಸ್ಥರ ನಡುವಿನ ವಿವಾದವೇ ಹಲ್ಲೆಗೆ ಕಾರಣ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next