Advertisement

ವನಿತಾ ಸಿಂಗಲ್ಸ್‌ ಸ್ಕ್ವಾಷ್‌; ಎಡವಿದ ಜೋಶ್ನಾ ಚಿನ್ನಪ್ಪ; ಗೆದ್ದ ಸುನಯನಾ

11:11 PM Aug 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ವನಿತಾ ಸಿಂಗಲ್ಸ್‌ ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತ ಅಚ್ಚರಿಯ ಫ‌ಲಿತಾಂಶ ದಾಖಲಿಸಿದೆ. ಭರವಸೆಯ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಕ್ವಾರ್ಟರ್‌ ಫೈನಲ್‌ನಲ್ಲಿ ಆಘಾತಕಾರಿ ಸೋಲುಂಡರೆ, ಸುನಯನಾ ಸಾರಾ ಕುರುವಿಲ್ಲ ಪ್ಲೇಟ್‌ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

Advertisement

ಜೋಶ್ನಾ ಚಿನ್ನಪ್ಪ ಅವರನ್ನು ಕೆನಡಾದ ಹೋಲಿ ನಾಟನ್‌ 11-8, 11-5, 15-13 ಅಂತರದಿಂದ ಪರಾಭವಗೊಳಿಸಿದರು. ಕರ್ನಾಟಕ ಮೂಲದ ಜೋಶ್ನಾ ಚಿನ್ನಪ್ಪ ಕಾಮನ್ವೆಲ್ತ್‌ ಗೇಮ್ಸ್‌ನ ಮೊದಲ ಸಿಂಗಲ್ಸ್‌ ಪದಕಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದರು. ಈ ಸಲವೂ ಅವರ ಗುರಿ ಈಡೇರಲಿಲ್ಲ. ಆದರೆ ಡಬಲ್ಸ್‌ನಲ್ಲಿ ಅವರು ಕಳೆದೆರಡು ಆವೃತ್ತಿಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಸುನಯನಾ ಗೆಲುವು
ಕೊಚ್ಚಿಯ ಸುನಯನಾ ಕುರುವಿಲ್ಲ ಶ್ರೀಲಂಕಾದ ಚನಿತ್ಮಾ ಸಿನಾಲಿ ಅವರನ್ನು ಕೇವಲ 12 ನಿಮಿಷಗಳಲ್ಲಿ 11-3, 11-2, 11-2 ಅಂತರದಿಂದ ಹಿಮ್ಮೆಟ್ಟಿಸಿದರು. ಸೋಮವಾರ ತಡರಾತ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next