Advertisement

ಕಾಮನ್‌ವೆಲ್ತ್‌ ಗೇಮ್ಸ್‌: ಭಾರತೀಯ ವನಿತಾ  ಟಿ.ಟಿ. ತಂಡ ಪ್ರಕಟ

11:09 PM May 31, 2022 | Team Udayavani |

ಬೆಂಗಳೂರು: ಮುಂಬರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆಗಾರರು ನಾಲ್ಕು ಸದಸ್ಯರ ಭಾರತೀಯ ವನಿತಾ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಇದಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಒಪ್ಪಿಗೆ ಸಿಗಬೇಕಿದೆ.

Advertisement

ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಪೂರೈಸದಿದ್ದರೂ ಅರ್ಚನಾ ಕಾಮತ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಮಾನಿಕಾ ಬಾತ್ರಾ ಅವರನ್ನು ಬಿಟ್ಟರೆ ಅರ್ಚನಾ 2ನೇ ಗರಿಷ್ಠ ರ್‍ಯಾಂಕಿನ ಭಾರತೀಯ ಆಟಗಾರರಾಗಿದ್ದಾರೆ. ದೇಶೀಯ ಪಂದ್ಯಗಳ ನಿರ್ವಹಣೆಯ ಆಧಾರದಲ್ಲಿ ಅರ್ಚನಾ ಸದ್ಯ ಇರುವ ಅಗ್ರ ನಾಲ್ವರು ಆಟಗಾರರ ಪೈಕಿ ಉತ್ತಮ ಸಾಧನೆ ನೀಡದಿದ್ದರೂ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳ ಲಾಗಿದೆ.

ಮಾನಿಕಾ ಬಾತ್ರಾ, ಅರ್ಚನಾ, ಶ್ರೀಜಾ ಅಕುಲಾ, ರೀತು ರಿಶ್ಯಾ ತಂಡದಲ್ಲಿದ್ದು ದಿಯಾ ಚಿತಾಲೆ ಮೀಸಲು ಆಟಗಾರರಾಗಿದ್ದಾರೆ. ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next