ಹೊಸದಿಲ್ಲಿ:ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಮಿಶ್ರ ತಂಡ ವಿಭಾಗದಲ್ಲಿ ಗ್ರೂಪ್ ಒಂದರಲ್ಲಿ ಸ್ಥಾನ ಪಡೆದಿದ್ದು, ಸುಲಭ ಎದುರಾಳಿಯನ್ನು ಹೊಂದಿದೆ.
ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಪಾಕಿಸ್ಥಾನ ಈ ವಿಭಾಗದ ಉಳಿದ ತಂಡಗಳು.ಬ್ಯಾಡ್ಮಿಂಟನ್ ಸ್ಪರ್ಧೆಯಾಗಿದ್ದು, ಜು. 29ರಿಂದ ಆ. 8ರ ತನಕ ಸಾಗಲಿದೆ. 16 ತಂಡಗಳು ಪಾಲ್ಗೊಳ್ಳಲಿರುವ ಮಿಶ್ರ ವಿಭಾಗದ ಫೈನಲ್ ಸ್ಪರ್ಧೆ ಆ. 2ರಂದು ನಡೆಯಲಿದೆ.
ತಂಡಗಳನ್ನು ಒಟ್ಟು 4 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡಗಳೆರಡು ನಾಕೌಟ್ ಹಂತ ಪ್ರವೇಶಿಸಲಿವೆ.
ಬ್ಯಾಡ್ಮಿಂಟನ್ ಡ್ರಾವನ್ನು ಮಾರ್ಚ್‌ನಲ್ಲೇ ನಡೆಸಲಾಗಿತ್ತು. ಬಳಿಕ ನೈಜೀರಿಯಾ ಹಿಂದೆ ಸರಿಯಿತು. ಬದಲಿ ತಂಡವಾದ ಜಾಂಬಿಯಾ ಕೆಲವು ದಿನಗಳ ಹಿಂದಷ್ಟೇ ತನ್ನ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿತ್ತು.
ಕಳೆದ ಗೋಲ್ಡ್‌ಕೋಸ್ಟ್ ಗೇಮ್ಸ್ ಫೈನಲ್‌ನಲ್ಲಿ ಭಾರತದ ಕೈಯಲ್ಲಿ ಸೋಲನುಭವಿಸಿದ 5 ಬಾರಿಯ ಚಾಂಪಿಯನ್ ಮಲೇಷ್ಯಾ 4ನೇ ಗ್ರೂಪ್‌ನಲ್ಲಿ ಸ್ಥಾನ ಪಡೆದಿದೆ.