ಬರ್ಮಿಂಗ್‌ಹ್ಯಾಮ್: 22ನೇ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನ ಸಮಾರಂಭ ಬರ್ಮಿಂಗ್ ಹ್ಯಾಮ್‌ನ “ಅಲೆಕ್ಸಾಂಡರ್ ಸ್ಟೇಡಿಯಂ’ನಲ್ಲಿ ಗರಿಗೆದರು.
ವುದಕ್ಕೂ ಕೆಲವು ಗಂಟೆಗಳ ಮೊದಲು ಇಲ್ಲಿನ ಕ್ರೀಡಾ ಗ್ರಾಮದಲ್ಲಿ ಭಾರತದ ತ್ರಿವರ್ಣ ಧ್ವಜ ಅರಳಿತು.
ಎರಡೂ ಹಾಕಿ ತಂಡಗಳ ಸದಸ್ಯರೂ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳು, ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ (ಐಒಎ) ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಖಜಾಂಚಿ ಆನಂದೇಶ್ವರ್ ಪಾಂಡೆ, ಅನುಲ್ ಧುಪರ್, ರಾಜೇಶ್ ಭಂಡಾರಿ ಮೊದಲಾದವರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತ ಸಮಾರಂಭದ ಆಕರ್ಷಣೆ ಆಗಿತ್ತು.
ಮನ್‌ಪ್ರೀತ್ ಕೂಡ ಧ್ವಜಾಧಾರಿ:
ಗುರುವಾರ ರಾತ್ರಿಯ ಉದ್ಘಾಟನ ಸಮಾರಂಭದಲ್ಲಿ ಪಿ.ವಿ. ಸಿಂಧು ಜತೆಗೆ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರಿಗೂ ಧ್ವಜಧಾರಿಯಾಗುವ ಅವಕಾಶ ಲಭಿಸಿತು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬರಗಾಲವನ್ನು ನೀಗಿಸಿದ ಹೆಗ್ಗಳಿಕೆ ಮನ್‌ಪ್ರೀತ್ ಅವರದಾಗಿತ್ತು. ಪ್ರತಿಯೊಂದು ದೇಶವೂ ಓರ್ವ ಪುರುಷ, ಓರ್ವ ವನಿತಾ ಕ್ರೀಡಾಪಟುವನ್ನು ಧ್ವಜಧಾರಿ ಯಾಗಿ ಹೆಸರಿಸಬೇಕು ಎಂಬ “ಗೇಮ್ಸ್ ಆಯೋಜನ ಸಮಿತಿ’ಯ ಕಡೇ ಗಳಿಗೆಯ ಸೂಚನೆಯಂತೆ ಇಲ್ಲಿ ಮನ್‌ಪ್ರೀತ್ ಹೆಸರು ಕಾಣಿಸಿಕೊಂಡಿತು.