Advertisement

ಕಾಮನ್ವೆಲ್ತ್ ಗೇಮ್ಸ್ 2022: ಬಾಕ್ಸಿಂಗ್‌; ಅಮಿತ್‌ ಪಂಘಲ್‌, ನೀತು ಫೈನಲ್‌ಗೆ

10:25 PM Aug 06, 2022 | Team Udayavani |

ಬರ್ಮಿಂಗ್ ಹ್ಯಾಮ್: ಭಾರತದ ಖ್ಯಾತ ಬಾಕ್ಸರ್‌ ಅಮಿತ್‌ ಪಂಘಲ್‌ 51 ಕೆಜಿ ವಿಭಾಗದಲ್ಲಿ ಫೈನಲ್‌ಗೇರಿದ್ದಾರೆ. ಇನ್ನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಘಂಘಾಸ್‌ ಕೂಡ ಫೈನಲ್‌ಗೇರಿದ್ದಾರೆ. ಇಬ್ಬರಿಗೂ ಕನಿಷ್ಠ ಬೆಳ್ಳಿ ಖಾತ್ರಿಯಾಗಿದೆ. ಅಮಿತ್‌ ಪಂಘಲ್‌ 2018 ಕಾಮನ್‌ವೆಲ್ತ್‌ನಲ್ಲಿ ಫೈನಲ್‌ಗೇರಿ, ಬೆಳ್ಳಿ ಗೆದ್ದಿದ್ದರು. ಇನ್ನು ನೀತುಗೆ ಇದೇ ಮೊದಲ ಕೂಟವಾಗಿದೆ.

Advertisement

ಅಮಿತ್‌ ಸೆಮಿಫೈನಲ್‌ನಲ್ಲಿ ಝಾಂಬಿಯದ ಪ್ಯಾಟ್ರಿಕ್‌ ಚಿನ್ಯೆಂಬ ವಿರುದ್ಧ 5-0 ಅಂಕಗಳಿಂದ ಗೆದ್ದರು. ಇಡೀ ಪಂದ್ಯ ಏಕಪಕ್ಷೀಯವಾಗಿ ನಡೆದರೂ, ಆರಂಭಿಕ ಸುತ್ತಿನಲ್ಲಿ ಅಮಿತ್‌ ತುಸು ಹಿನ್ನಡೆ ಅನುಭವಿಸಿದ್ದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದ ಅಮಿತ್‌, ಇಲ್ಲಿ ಆ ತಪ್ಪನ್ನು ಮಾಡಲು ಹೋಗಲಿಲ್ಲ. ಅದ್ಭುತ ಹೊಡೆತಗಳನ್ನು ಬಾರಿಸಿ ಹಿನ್ನಡೆಯನ್ನು ನಿವಾರಿಸಿಕೊಂಡರು. ಪ್ರಸ್ತುತ 26 ವರ್ಷದ ಅಮಿತ್‌ 2018ರ ಏಷ್ಯಾಡ್‌ನ‌ಲ್ಲಿ ಚಿನ್ನ ಗೆದ್ದಿದ್ದಾರೆ.

ಆಕ್ರಮಣಕಾರಿ ನೀತು: ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕೆನಡಾದ ಪ್ರಿಯಾಂಕಾ ಧಿಲ್ಲೋನ್‌ ವಿರುದ್ಧ ನೀತು ಘಂಘಾಸ್‌ ಗೆದ್ದರು. ಈ ಪಂದ್ಯ ಆರ್‌ಎಸ್‌ಸಿ (ರೆಫ‌ರಿ ಸ್ಟಾಪ್ಡ್ ಕಂಟೆಸ್ಟ್‌) ರೀತಿಯಲ್ಲಿ ಮುಗಿಯಿತು. ನೀತು ಆಕ್ರಮಣಕಾರಿ ಆಟ, ಎದುರಾಳಿಯ ಸ್ಥಿತಿಯನ್ನು ಗಮನಿಸಿ ರೆಫ‌ರಿಯೇ ಪಂದ್ಯವನ್ನು ನಿಲ್ಲಿಸಿದರು!

ನೀತು ರಕ್ಷಣೆಯನ್ನಿಟ್ಟುಕೊಳ್ಳದೇ ಎದುರಾಳಿಯನ್ನು ಮುಕ್ತವಾಗಿ ಆಹ್ವಾನಿಸಿದರು. ಎದುರಾಳಿಯ ಮುಖಕ್ಕೆ ನೇರವಾಗಿ ಹೊಡೆಯುತ್ತ, ಎರಡೂ ಕೈಗಳನ್ನು ಬಳಸಿಕೊಂಡು ಆಕ್ರಮಣ ಮಾಡುತ್ತ ಸಾಗಿದರು. ಇದು ಎದುರಾಳಿಯನ್ನು ಅಕ್ಷರಶಃ ತಬ್ಬಿಬ್ಟಾಗಿಸಿತು.

Advertisement

Udayavani is now on Telegram. Click here to join our channel and stay updated with the latest news.

Next