Advertisement

ಕಾಮನ್ವೆಲ್ತ್‌ ಗೇಮ್ಸ್‌ ಹಾಕಿ: ಭಾರತಕ್ಕೆ ಅವಳಿ ಗೆಲುವು

11:19 PM Jul 31, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಹಾಕಿಯಲ್ಲಿ ಭಾರತದ ಪುರುಷರ ತಂಡ ಗೆಲುವಿನ ಆರಂಭ ಪಡೆದಿದೆ. ರವಿವಾರದ ಮೊದಲ ಮುಖಾಮುಖಿಯಲ್ಲಿ ಘಾನಾ ವಿರುದ್ಧ 11-0 ಅಂತರದ ಜಯಭೇರಿ ಮೊಳಗಿಸಿತು.

Advertisement

“ಎ’ ವಿಭಾಗದ ವನಿತಾ ಹಾಕಿ ಸ್ಪರ್ಧೆಯಲ್ಲಿ ವೇಲ್ಸ್‌ ವಿರುದ್ಧ ಭಾರತ 3-1 ಅಂತರದಿಂದ ಗೆದ್ದು ಬಂದಿತು. ವಂದನಾ ಕಟಾರಿಯಾ ಎರಡು, ಗುರ್ಜಿತ್‌ ಕೌರ್‌ ಒಂದು ಗೋಲು ಬಾರಿಸಿದರು.

ಇದು ವನಿತೆಯರಿಗೆ ಒಲಿದ ಸತತ 2ನೇ ಜಯ. ಮೊದಲ ಪಂದ್ಯದಲ್ಲಿ ಘಾನಾವನ್ನು ಮಣಿಸಿತ್ತು. ಮುಂದಿನ ಎದುರಾಳಿ ಆತಿಥೇಯ ಇಂಗ್ಲೆಂಡ್‌. ಈ ಪಂದ್ಯ ಮಂಗಳವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next