Advertisement

Manipal ನಿಯಮಾವಳಿ ಉಲ್ಲಂಘಿಸಿ ಪಾರ್ಟಿ: ಪ್ರಕರಣ ದಾಖಲು

12:54 AM Apr 09, 2024 | Team Udayavani |

ಮಣಿಪಾಲ: ನಿಯಮ ಉಲ್ಲಂಘಿಸಿ ರೆಸ್ಟೋರೆಂಟ್‌ನಲ್ಲಿ ಮ್ಯೂಸಿಕ್‌ ಹಾಕಿ ಪಾರ್ಟಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಹಾಗೂ ಮಾಲಕರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಣಿಪಾಲ ಪೊಲೀಸ್‌ ನಿರೀಕ್ಷಕರು ಎ. 7ರ ತಡರಾತ್ರಿ ರೌಂಡ್ಸ್‌ನಲ್ಲಿದ್ದಾಗ ಪೆರಂಪಳ್ಳಿ ರಸ್ತೆಯ ಬಳಿ ಇರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಮ್ಯೂಸಿಕ್‌ ಹಾಕಿ ಪಾರ್ಟಿ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ವ್ಯವಸ್ಥಾಪಕ ಮಿಥುನ್‌ ಕುಮಾರ್‌ ಅವರಲ್ಲಿ ವಿಚಾರಿಸಿದಾಗ ಬಾರ್‌ನ ಮಾಲಕ ದಿನೇಶ್‌ ಬಿ. ಅವರಲ್ಲಿ ಅನುಮತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದರು.

ಆದರೆ ಅವರಿಬ್ಬರೂ ಅಬಕಾರಿ ಇಲಾಖೆಯ ಪರವಾನಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಯಾವುದೇ ಅನುಮತಿ ಇಲ್ಲದೇ ಮ್ಯೂಸಿಕ್‌ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next