Advertisement

ಸೆಮಿಫೈನಲ್‌ ಪ್ರವೇಶಿಸಿದ ಮೇರಿ; ಪದಕ ಖಾತ್ರಿ

06:10 AM Apr 09, 2018 | |

ಗೋಲ್ಡ್‌ಕೋಸ್ಟ್‌:  ಐದು ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌ (48 ಕೆಜಿ) ಸೆಮಿಫೈನಲ್‌ ಪ್ರವೇಶಿಸುವ ಮೂಲಕ ತಮ್ಮ ಮೊದಲ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಅವರು ರವಿವಾರದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ‌ ಮೇಗನ್‌ ಗಾರ್ಡನ್‌ ಅವರನ್ನು 5-0 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದರು.

Advertisement

ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಮೇರಿ ಕೋಮ್‌ ಎ. 11ರ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಶ್ರೀಲಂಕಾದ ಅನುಷಾ ದಿಲುÅಷಿ ಅವರನ್ನು ಎದುರಿಸಲಿದ್ದಾರೆ. ರಾಜ್ಯಸಭಾ ಸದಸ್ಯೆಯೂ ಆಗಿರುವ ಅನುಭವಿ ಬಾಕ್ಸರ್‌ ಮೇರಿ, ಸೆಮಿಫೈನಲ್‌ನಲ್ಲೂ ಗೆಲುವು ಸಾಧಿಸುವ ನಿರೀಕ್ಷೆಯಿದೆ.

ಈ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕೋಮ್‌ಗೆ ಪದಕ ಖಚಿತಪಡಿಸಲು ಒಂದೇ ಪಂದ್ಯ ಗೆಲ್ಲಬೇಕಿತ್ತು. ಇದೀಗ ಸಾಕಾರಗೊಂಡಿದೆ. ಮೇರಿ ಇನ್ನೆಷ್ಟು ದೂರ ಪಯಣಿಸಬಹುದೆಂಬುದು ಮುಂದಿನ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next