Advertisement

ಕಾಮನ್ವೆಲ್ತ್ ಬಾಕ್ಸಿಂಗ್‌: ಪದಕ ಖಾತ್ರಿಗೊಳಿಸಿದ ಹುಸ್ಸಮುದ್ದೀನ್‌, ನೀತು

10:36 PM Aug 03, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಬಾಕ್ಸರ್‌ಗಳಾದ ಹುಸ್ಸಮುದ್ದೀನ್‌ ಮೊಹಮ್ಮದ್‌ ಮತ್ತು ನೀತು ಗಂಘಾಸ್‌ ಸೆಮಿ ಫೈನಲ್‌ ಪ್ರವೇಶಿಸುವ ಮೂಲಕ ಎರಡು ಪದಕಗಳನ್ನು ಖಾತ್ರಿಗೊಳಿ ಸಿದರು. ಪುರುಷರ 57 ಕೆಜಿ ವಿಭಾಗದಲ್ಲಿ ಹುಸ್ಸಮುದ್ದೀನ್‌ ಹಾಗೂ ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಕ್ವಾರ್ಟರ್‌ ಫೈನಲ್‌ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತರು.

Advertisement

ಬುಧವಾರ ತಡರಾತ್ರಿ ಮತ್ತೆ ಮೂರು ಮಂದಿ ನೆಚ್ಚಿನ ಸ್ಪರ್ಧಿಗಳಾದ ಲವ್ಲೀನಾ ಬೊರ್ಗೊಹೇನ್‌, ನಿಖತ್‌ ಜರೀನ್‌ ಮತ್ತು ಆಶಿಷ್‌ ಕುಮಾರ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ನಿಜಾಮಾಬಾದ್‌ನ 28 ವರ್ಷದ ಹುಸ್ಸಮುದ್ದೀನ್‌ ನಮೀಬಿಯಾದ ಟ್ರಯಗೇನ್‌ ಮಾರ್ನಿಂಗ್‌ ಅವರನ್ನು 4-1 ಅಂತರದಿಂದ ಪರಾಭವಗೊಳಿಸಿದರು. ಹುಸ್ಸಮುದ್ದೀನ್‌ ಕಳೆದ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಎರಡು ಬಾರಿಯ ಯೂತ್‌ ಚಾಂಪಿಯನ್‌, 21 ವರ್ಷದ ನೀತು ಗಂಘಾಸ್‌ ಉತ್ತರ ಐರ್ಲೆಂಡ್‌ನ‌ ನಿಕೋಲ್‌ ಕ್ಲೈಡ್‌ ವಿರುದ್ಧ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next