ಇದು 61 ಸೆಂ.ಮೀ ಇರುವ ಬಣ್ಣ ,ಬಣ್ಣ ಇರುವ ಬಾತುಕೊಳಿ.Common Shelduck (TodornaTodorna ) M Duck + ಇದು ಚಿಪ್ಪಿನ ಒಳಗಿರುವ ಮಾಂಸ ಮತ್ತು ಸುಣ್ಣದಕಲ್ಲಿನ ಮೇಲೆ ಬೆಳೆಯುವ ಮಾಂಸವನ್ನು ಹೆಚ್ಚಾಗಿ ತಿನ್ನುವುದರಿಂದ ಇದಕ್ಕೆ ಚಿಪ್ಪು ಬಾತು ಇಲ್ಲವೆ ಶಲ್‌ದಕ್ ಎಂಬ ಹೆಸರು ಬಂದಿರಬೇಕು.
ಚಿಪ್ಪು ಬಾತು ಹೆಚ್ಚಾಗಿ ಕೆಸರಿನ ಗಲೀಜು ನೀರು ತುಂಬಿದ ಭಾಗದಲ್ಲಿ ಇರುವುದು ಕಡಿಮೆ. ತಿಳಿ ಹಾಗೂ ಸ್ವತ್ಛ ನೀರಿನ ಹರಿವು ಇಲ್ಲವೇ ನದಿ ತೀರಗಳಲ್ಲೆ ಇರುವುದು ಜಾಸ್ತಿ. ನಾಗಾಲ್ ಸರೋವರ, ಎನ್. ಎಫ್. ಎಲ್‌ಎಶ್ ಸರೋವರ, ನಾಗಾಲ ಅಣೆಕಟ್ಟಿನ ಪ್ರದೇಶದಲ್ಲಿ ಇದು ಕಂಡ ವರದಿಯಾಗಿದೆ. ಇದು ಚಳಿಗಾಲದಲ್ಲಿ ಭಾರತದ ಪಶ್ಚಿಮ ಭಾಗಕ್ಕೆ ವಲಸೆ ಬರುತ್ತವೆ. ಇತರ ಬಾತುಗಳು ಕೆಸರಿನ ಪ್ರದೇಶ ಇಷ್ಟ ಪಡುತ್ತವೆ. ಆದರೆ ಇದು ವಲಸೆಬಂದಾಗ ಕೇವಲ ತಿಳಿ ನೀರಿನ ಸ್ವತ್ಛ ಪ್ರದೇಶದ ನದಿ ದಡಗಳ ಸಸಮೀಪ ಏಡಿ, ಕಪ್ಪೆಚಿಪ್ಪು, ಕಲ್ಲು ಮಾಂಸ, ಕೀಟ, ಹುಳ, ಜಲಸಸ್ಯಗಳನ್ನು ಕಿತ್ತುತಿನ್ನುತ್ತಾ ಸ್ವತ್ಛ ದಿಬ್ಬಳ ಸಮೀಪ ಅಡ್ಡಾಡುತ್ತಾ ತನ್ನಆಹಾರ ದೊಕಿಸುವುದು ಇದರ ವೈಶಿಷ್ಟ್ಯ.
ಹೊಂಡದ ನೀರು ಮಲಿನವಾದರೆ ಆ ಕಡೆ ಸುಳಿಯುವುದು ಕಡಿಮೆ. ನೀರಿನಲ್ಲ ಇಳಿಯುವುದು, ಮುಳುಗು ಹೊಡೆಯುವುದು ಕಡಿಮೆ. ಹಾಗಾಗಿ ಈ ಕ್ರಿಯೆಯಲ್ಲಿ ಇತರ ಬಾತುಗಳಿಗಿಂತ ವಿಲಕ್ಷಣ ಸ್ವಭಾವ ಹೊಂದಿದೆ. ಮರಿ ಮಾಡುವ ಸಮಯದಲ್ಲಿ ಇದರ ಕೊಕ್ಕಿನ ಬುಡದಲ್ಲಿ ಮೇಲೆ ಚಿಕ್ಕ ಕೆಂಪು ಬಣ್ಣದ ಬುಗುಟ ಮೂಡುತ್ತದೆ. ಇದು ಗಂಡಿಗೆ ಮಾತ್ರ ಮೂಡುವುದು. ಸಾಮಾನ್ಯವಾಗಿ ಪ್ರೌಢಾವಸ್ಥೆà ತಲುಪಿದ ಗಂಡು ಚಿಪ್ಪು ಬಾತುಗಳಿಗೆ ಈ ಬುಗುಟ ಇರುತ್ತದೆ. ಹೆಣ್ಣು ಗಂಡು ಎರಡೂ ಒಂದೇ ರೀತಿ ಇರುತ್ತವೆ. ಗಂಡಿನ ಗಾತ್ರ ತೂಕ ಹೆಚ್ಚು. ಹೆಣ್ಣು 55 ರಿಂದ 65 ಸೆಂ.ಮೀ. ಗಂಡು 800 ಗ್ರಾಂ. ನಿಂದ 1,500 ಗ್ರಾಂ ಇರುತ್ತದೆ. ರೆಕ್ಕೆಯ ಅಗಲ 110 ರಿಂದ 130 ಸೆಂ.ಮೀ. ಇದಕ್ಕೆ ಚಂಚು, ಕಾಲು ಕೆಂಪು ಬಣ್ಣದಿಂದ ಕೂಡಿರುತ್ತದೆ. ಕಾಲಲ್ಲಿ ಜಾಲ ಪಾಸ ಕೆಂಪಿರುತ್ತದೆ. ಇತರ ಬಾತುಗಳ ಜಾಲಪಾದ ಬೂದು ಬಣ್ಣವಾಗಿರುತ್ತದೆ. ಕುತ್ತಿಗೆ ಬುಡದಲ್ಲಿ ತಿಳಿ ಕಂದು ಬಣ್ಣದ ಪಟ್ಟಿ ಇದೆ. ರೆಂಪ್ ಅಂದರೆ ಬಾಲದ ಪುಕ್ಕದ ಅಡಿಯಲ್ಲಿ ಕೆಂಪು ಬಣ್ಣ ಇದೆ. ತಲೆ ಮತ್ತು ಕೊರಳಿನ ವರೆಗೆಕಪ್ಪು ಮಿಶ್ರಿತ ಹಸಿರುಬಣ್ಣ ಇದೆ. ತಲೆಯಲ್ಲಿ ಚಿಕ್ಕ ಬಿಳಿ ಚುಕ್ಕೆ ಕಾಣುವುದು. ಇದು ಕುಳಿತಾಗ ರೆಕ್ಕೆಯಲ್ಲಿ ಕಂದು ಕಪ್ಪು, ಬಿಳಿ, ಕಪ್ಪು ಬಣ್ಣಕಾಣುವವು. ಇದು ಹಾರುವಾಗರೆಕ್ಕೆ ಪ್ರಾಥಮಿಕ ಗರಿಕಪ್ಪಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇತರ ಬಾತುಗಳಂತೆ ಗುಂಪಾಗಿ ಹಾರುತ್ತವೆ. ಹಾರುವಾಗ ತನ್ನಕತ್ತನ್ನು ಮುಂದೆಚಾಚಿ, ಕಾಲನ್ನು ಹಿಂಮುಖವಾಗಿ ಚಾಚಿ ಹಾರುತ್ತದೆ.
ಇದಕ್ಕೆ ಬಹು ದೂರ ಹಾರುವ ಸಾಮರ್ಥಯ ಇದೆ. ಪ್ರೌಢಾವಸ್ಥೆಗೆ ಬರದ ಹಕ್ಕಿಗಳಲ್ಲಿ ಚುಂಚು ಹಳದಿಯಾಗಿರುತ್ತದೆ. ಕಾಲು ಸಹ ತಿಳಿ ಕೆಂಪಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಇದು ಪಶ್ಚಿಮ ಯುರೋಪು, ಇಂಗ್ಲೆಂಡ್, ಕಪ್ಪು ಸಮುದ್ರ, ಕಾಸ್ಪಿನ್ ಸಮುದ್ರದಂಡೆ ಗುಂಟ ಮರಿ ಮಾಡುತ್ತವೆ. ಇದು ಸಾಮಾನ್ಯವಾಗಿ ಚಿಕ್ಕ ಗುಂಪಿನಲ್ಲಿ ವಲಸೆ ಬರುತ್ತದೆ. ಆದರೆ 1937 ಚಿಲ್ಕಾ ಸರೋವರ ಮತ್ತು ಸಿಂದ ಪ್ರದೇಶದಲ್ಲಿದೊಡ್ಡ ಗುಂಪಿನಲ್ಲಿ ವಲಸೆ ಬಂದಿರುವುದು ದಾಖಲಾಗಿದೆ.
ಕ್ಯಾಪ್ಸಿಯನ್ ಮತ್ತು ಕಪ್ಪು ಸಮುದ್ರದ ಪ್ರದೇಶದಿಂದ ಭಾರತಕ್ಕೆ ಯಾವ ಮಾರ್ಗವಾಗಿ ಬರುತ್ತವೆ. ಸಮುದ್ರ ದಾಟಿ ಏಕ ಕಾಲಕದಲ್ಲಿ ಎಷ್ಟು ದೂರ ಹಾರುವ ಸಾಮರ್ಥಯ ಇದಕ್ಕಿದೆ? ಹೀಗೆ ವಲಸೆ ಬರುವಾಗ ಏನೇನು ತಯಾರಿ ನಡೆಸುತ್ತವೆ? ಮಾರ್ಗದ ಬಹುದೂರ ನಿಲ್ಲದೇ ಹಾರುವಾಗ ಎಷ್ಟು ಸಮಯ ಆಹಾರ ಇಲ್ಲದೇ ನೀರಿಲ್ಲದೇ ಮ್ಯಾನೇಜ್ ಮಾಡುತ್ತದೆ? ಆಗ ಅದರ ದೇಹದ ಆರೋಗ್ಯ ಸ್ಥಿತಿ ಹೇಗೆ? ಎಂಬ ಬಗ್ಗೆ ತುಂಬಾ ಕುತೂಲ ಇದೆ.