ಕುಟುಂಬ ಕಲ್ಯಾಣ ಸಮಿತಿ ರಚಿಸಲಾಗಿದ್ದು, ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಜಮೋಹನ ಶ್ರೀವಾಸ್ತವ ಅವರನ್ನು ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಸ್.ಪಾಟೀಲ ಹೇಳಿದರು.
Advertisement
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸದಸ್ಯರಾಗಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಕವಿತಾ ಹುಷಾರೆ ಹಾಗೂ ನ್ಯಾಯವಾದಿ ಬಿ.ಎಸ್.ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರವಧಿ 3 ತಿಂಗಳು ಇರುತ್ತದೆ. ಅವರ ಕಾರ್ಯದಕ್ಷತೆ ಆಧರಿಸಿ ಅಧಿಕಾರವಧಿ ವಿಸ್ತರಿಸಲಾಗುತ್ತದೆ ಎಂದರು. ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಒಬ್ಬ ಆರೋಪಿಯನ್ನೂ ಬಂಧಿಸದೇ ಪ್ರಕರಣದಲ್ಲಿ ಭಾಗವಹಿಸದಿರುವ ಹಲವರನ್ನು ಬಂಧಿಸಲಾಗುತ್ತಿದೆ. ಇದರಿಂದಾಗಿ ಪ್ರಕರಣದಲ್ಲಿ ಭಾಗಿಯಾಗದೇ ಇರುವವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಲ್ಲದೇ ಕಾಯ್ದೆಯ ದುರ್ಬಳಕೆಗೆ ಅವಕಾಶವಿರುತ್ತದೆ.
ಬೀದರ: ವರದಕ್ಷಿಣೆ ನಿಷೇಧ ಕಾಯ್ದೆಯ ದುರುಪಯೋಗ ತಡೆಗೆ ಜಿಲ್ಲಾ ನ್ಯಾಯಾಲಯ ಆವರಣದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಟ್ಟಡದಲ್ಲಿ ಸ್ಥಾಪಿಸಿರುವ ಕುಟುಂಬ ಕಲ್ಯಾಣ ಸಮಿತಿ ಕಚೇರಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶ ಎಂ.ಎಸ್. ಪಾಟೀಲ ಸೋಮವಾರ ಉದ್ಘಾಟಿಸಿದರು.
Related Articles
Advertisement
ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಪೊಲೀಸರು ಸಮಿತಿಗೆ ಕಳುಹಿಸಬೇಕು. ನ್ಯಾಯಾಲಯಕ್ಕೆ ಬರುವ ಪ್ರಕಣಗಳನ್ನು ಸಹ ಸಮಿತಿಗೆ ಕಳುಹಿಸಲಾಗುತ್ತದೆ. ಸಮಿತಿಯು ಕನಿಷ್ಠ ವಾರಕ್ಕೊಮ್ಮೆ ಸಭೆ ಸೇರಿ ಒಂದು ತಿಂಗಳೊಳಗೆ ಪ್ರಕರಣದಲ್ಲಿನ ಸತ್ಯಾಂಶ ಪರಿಶೀಲಿಸಿ ಸಂಬಂ ಧಿಸಿದ ಪೊಲೀಸ್ ಠಾಣೆಗಳಿಗೆ ವರದಿ ನೀಡುತ್ತದೆ. ಈ ವರದಿ ಆಧರಿಸಿ ಅಪರಾಧಿಗಳನ್ನು ಬಂಧಿಸಲಾಗುತ್ತದೆ. ಸಮಿತಿ ವರದಿ ನೀಡುವವರೆಗೂ ಆರೋಪಿಗಳನ್ನು ಬಂಧಿಸುವಂತಿಲ್ಲ.ಎಂ.ಎಸ್. ಪಾಟೀಲ, ಜಿಲ್ಲಾ ನ್ಯಾಯಾಧೀಶ