Advertisement

Supreme Court: ಮತದಾರರ ಮದ್ಯ ಪರೀಕ್ಷೆ ಕೋರಿಕೆ ಅರ್ಜಿ ತಳ್ಳಿ ಹಾಕಿದ ಸುಪ್ರೀಂ

11:47 PM Apr 10, 2024 | Team Udayavani |

ಹೊಸದಿಲ್ಲಿ: ಪ್ರತೀ ಮತ ಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮತದಾರರಿಗೆ ಬ್ರೆತ್‌ಲೈಸರ್‌ ಟೆಸ್ಟ್‌  (ಅಲ್ಕೋ ಹಾಲ್‌ ಪರೀಕ್ಷೆ)ಗೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

Advertisement

ಇದಕ್ಕೂ ಮೊದಲು ಆಂಧ್ರ ಪ್ರದೇಶ ಹೈಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿತ್ತು. ಸುಪ್ರೀಂ ಕೋರ್ಟ್‌ನ ನ್ಯಾ|ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತಾ ಅವರು, ಹೈಕೋರ್ಟ್‌ನ ಆದೇಶಕ್ಕೆ ಮಧ್ಯ ಪ್ರವೇಶಿಸಲು ನಿರಾಕರಿಸಿತು.

ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರ ಹಿತಾಸಕ್ತಿ ಅರ್ಜಿಯಾಗಿದೆ ಎಂದು ಟೀಕಿಸಿತು. ಆಂಧ್ರದ ಜನವಾಹಿನಿ ಪಕ್ಷವು ಈ ಪಿಐಎಲ್‌ ಅರ್ಜಿಯನ್ನು ದಾಖಲಿಸಿತ್ತು. ಮತದಾನ ದಿನ ಡ್ರೈ ಡೇ(ಮದ್ಯ ಮಾರಾಟ ನಿಷೇಧ) ಆಗಿರುತ್ತದೆ ಎಂದು ಕೋರ್ಟ್‌ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next