Advertisement

Delhi Liquor Scam: 6 ತಿಂಗಳ ಬಳಿಕ ಅಪ್ ನಾಯಕ ಸಂಜಯ್ ಸಿಂಗ್‌ಗೆ ಜಾಮೀನು ಮಂಜೂರು

07:10 PM Apr 02, 2024 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನದ ನಂತರ ಹೊಡೆತಗಳ ಮೇಲೆ ಹೊಡೆತವನ್ನು ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) (AAP) ಮಂಗಳವಾರ (ಏಪ್ರಿಲ್ 2) ಒಂದು ರಿಲೀಫ್ ಸಿಕ್ಕಿದೆ. ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಸಂಜಯ್ ಸಿಂಗ್ ಅವರನ್ನು ಕಳೆದ ಅಕ್ಟೋಬರ್ 4, 2023 ರಂದು ಬಂಧಿಸಲಾಗಿತ್ತು ಇದಾದ ಸುಮಾರು ಆರು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಗೊಳ್ಳುವಂತಾಗಿದೆ. ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ತಿಹಾರ್ ಜೈಲಿನಲ್ಲಿರುವಾಗಲೇ ಸಿಂಗ್ ಅವರಿಗೆ ಜಾಮೀನು ಸಿಕ್ಕಿದೆ.

ಕೋರ್ಟ್ ಹೇಳಿದ್ದೇನು:
ವಿಚಾರಣೆಯ ಸಂದರ್ಭದಲ್ಲಿ, ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಹೆಚ್ಚು ಕಾಲ ಕಸ್ಟಡಿಯಲ್ಲಿಡುವ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯವನ್ನು ಕೇಳಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಪಿಬಿ ವರಾಳೆ ಅವರ ಪೀಠವು ಈ ಬಗ್ಗೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರನ್ನು ಕೇಳಿದೆ. ಇದಾದ ಬಳಿಕ ಜಾಮೀನಿಗೆ ಅಭ್ಯಂತರವಿಲ್ಲ ಎಂದು ಇಡಿ ತಿಳಿಸಿದ್ದು, ನ್ಯಾಯಾಲಯ ಜಾಮೀನು ನೀಡಿತ್ತು.

ಜಾಮೀನಿನ ಅವಧಿಯಲ್ಲಿ ಸಿಂಗ್ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸಂಜಯ್ ಸಿಂಗ್‌ಗೆ ತಾಕೀತು ಮಾಡಿದೆ.

Advertisement

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… ಒಂಬತ್ತು ಮಾವೋವಾದಿಗಳು ಹತ, ಮುಂದುವರೆದ ಕಾರ್ಯಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next