ಪಡುಬಿದ್ರಿ: ರಾಷ್ಟ್ರೀಯ ಹಸುರು ನ್ಯಾಯಮಂಡಳಿ ಎದುರು ನಂದಿಕೂರು ಜನಜಾಗೃತಿ ಸಮಿತಿ 2018ರಲ್ಲಿ ದಾಖಲಿಸಿದ ಪ್ರಕರಣವೊಂದರ ಭಾಗವಾಗಿ ಪರಿಸರ ತಜ್ಞರ ಸಮಿತಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.
ಡಾ.ಕೃಷ್ಣರಾಜ್, ಡಾ.ಶ್ರೀಕಾಂತ್, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ ಬೆಂಗಳೂರು ಇದರ ಜಂಟಿ ನಿರ್ದೇಶಕ ತಿರುಮೂರ್ತಿ ನೇತೃತ್ವದ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು
ಊಳ್ಳೂರರಿನ ಜಗನ್ನಾಥ ಮೂಲ್ಯ ಹಾಗು ಎಲ್ಲೂರಿನ ಜಯಂತ್ ರಾವ್, ಗಣೇಶ್ ರಾವ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ, ಕುಂಠಿತವಾಗಿರುವ ಕೃಷಿ ಹಾಗು ತೋಟಗಾರಿಕಾ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತಂಡವು ಪರಿಶೀಲಿಸಿತು.
ಇದನ್ನೂ ಓದಿ:ಅಪಾಯದಿಂದ ಪಾರಾಗಿಲ್ಲ ಪಶ್ಚಿಮ ಘಟ್ಟ ! ಐಯುಸಿಎನ್ ವರದಿಯಿಂದ ಬಹಿರಂಗ
ಮುದರಂಗಡಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಜನರ ಆರೋಗ್ಯದ ಕುರಿತಾದ ಮಾಹಿತಿ ಸಂಗ್ರಸಿದರು.
ಯುಪಿಸಿಎಲ್ ನಿಂದ ಉಂಟಾಗಿರುವ ಪರಿಸರ ಸಮಸ್ಯೆ ನೀರಿನ ಸಮಸ್ಯೆ ಆರೋಗ್ಯದ ಸಮಸ್ಯೆಗಳನ್ನು ಪರಿಶೀಲಿಸಿ ಕೇಂದ್ರೀಯ ಹಸಿರು ಪೀಠಕ್ಕೆ ಈ ತಂಡವು ಜನವರಿ ಅಂತ್ಯದೊಳಗೆ ವರದಿ ನೀಡಬೇಕಿದ್ದು, ಆಳವಾದ ಸಮಸ್ಯೆ ಇರುವುದರಿಂದ ಈ ದಿನದ ವಿಸ್ತರಣೆಯಾಗಿದೆ ಎಂದು ತಜ್ಞರ ತಂಡದ ಡಾ.ಕೃಷ್ಣರಾಜ್ ಅಭಿಪ್ರಾಯಿಸಿದ್ದಾರೆ.
ಕೇಂದ್ರೀಯ ಹಸಿರು ನ್ಯಾಯ ಪೀಠದಲ್ಲಿ ನಂದಿಕೂರು ಜನಜಾಗೃತಿ ಸಮಿತಿ 2018 ರಲ್ಲಿ ಹೂಡಿದ್ದ ದಾವೆಯ ತೀರ್ಪು ಸಮಿತಿ ಪರವಾಗಿದ್ದು,ಆ ಕುರಿತಾಗಿ ಸಮಿತಿ ಬೇಡಿಕೆ ಇರಿಸಿದ್ದ 130 ಕೋಟಿ ರೂ ಪರಿಹಾರ ಧನದ ಕುರಿತಾಗಿ ಈ ತಜ್ಞರ ತಂಡವು ಹಸಿರು ಪೀಠದ ಅದೇಶದಂತೆ ಯೋಜನೆ ಸಂತ್ರಸ್ತರ ಅಹವಾಲು ಆಲಿಸಲು ಅಲ್ಲಿಗೆ ತೆರಳಿತ್ತು
ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕಾ, ಆರೋಗ್ಯ, ಪರಿಸರ ಇಲಾಖೆಯ ಅಧಿಕಾರಿಗಳು ಜೊತೆಗಿದ್ದರು.