Advertisement

ಸೌಕರ್ಯ ಕಲ್ಪಿಸಲು ಬದ್ಧ: ರಾಜುಗೌಡ

11:18 AM Jan 07, 2019 | |

ಕಕ್ಕೇರಾ: ಗ್ರಾಮೀಣ ಪ್ರದೇಶದಲ್ಲಿ ಇನ್ಮುಂದೆ ನಿರಂತರ ವಿದ್ಯುತ್‌ ಹರಿಯಲಿದೆ ಎಂದು ಶಾಸಕ ರಾಜುಗೌಡ ಹೇಳಿದರು.
ಪಟ್ಟಣದ ಕವಸಾರ ದೊಡ್ಡಿ, ಸ್ವಾಮೇರ ದೊಡ್ಡಿಗಳಿಗೆ ದೀನ್‌ ದಯಾಳ್‌ ಉಪಾಧ್ಯಯ ಗ್ರಾಮ ಜೋತಿ ವಿದ್ಯುತ್‌ ಯೋಜನೆಡಿಯಲ್ಲಿ ಹೊಸದಾಗಿ ಕಲ್ಪಿಸಲಾದ ವಿದ್ಯುತ್‌ ಸೌಕರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯುತ್‌ ಸಂಪರ್ಕ ಇಲ್ಲದೆ ಗ್ರಾಮೀಣ ಹಾಗೂ ದೊಡ್ಡಿಗಳಿಗೆ ಹೊಸದಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಈಗಾಗಲೇ ಸುರಪುರ ತಾಲೂಕಿನಲ್ಲಿ ದಿನ್‌ ದಯಾಳ್‌ ಯೋಜನೆಡಿಯಲ್ಲಿ 27 ಕೋಟಿ ರೂ. ಅನುದಾನದಲ್ಲಿ ಈ ಒಂದು ಕಾಮಗಾರಿ ತುರ್ತು ನಡೆದಿದೆ. ಇದು ನಿರಂತರವಾಗಿ ವಿದ್ಯುತ್‌ ಪೂರೈಸುವ ಕೆಲಸವಾಗಿದೆ ಎಂದು ಅವರು ತಿಳಿಸಿದರು.

Advertisement

ಈ ಭಾಗದಲ್ಲಿ ಅನೇಕ ದೊಡ್ಡಿಗಳಿಗೆ ವಿದ್ಯುತ್‌ ಕೊರತೆ ಸಮಸ್ಯೆ ಎದುರಿಸಬೇಕಾಗಿತ್ತು. ವಿದ್ಯುತ್‌ ಇಲ್ಲದೆ ಚಿಮಣಿ ಬುಡ್ಡಿಯಲ್ಲಿ ಜನ ಕಾಲ ಕಳೆಯಬೇಕಿತ್ತು. ಸದ್ಯ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ಈಗ ಯಾವುದೇ ಸಮಸ್ಯೆ ಆಗದು ಎಂದು ಹೇಳಿದರು. ಜನದಟ್ಟಣೆ ಮತ್ತು ಅಧಿಕ ಮನೆಗಳಿದ್ದು, ವಿದ್ಯುತ್‌ ಸಂಪರ್ಕ ಹೊಂದಿಲ್ಲದಿದ್ದರೆ ಅಂತಹ ಗ್ರಾಮ ಅಥವಾ ಮನೆಗಳನ್ನು ಗುರುತಿಸಿ ವಿದ್ಯುತ್‌ ಪರಿವರ್ತಕದೊಂದಿಗೆ ವಿದ್ಯುತ್‌ ಜೋಡಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಎಪಿಎಂಸಿ ಸದಸ್ಯ ಬಸವರಾಜ ಆರೇಶಂಕರ, ಪರಮಣ್ಣ ಪೂಜಾರಿ, ರಮೇಶ ಶೆಟ್ಟಿ ಸೇರಿದಂತೆ ವಿವಿಧ ಮುಖಂಡರು ಹಾಗೂ ವಿದ್ಯುತ್‌ ಇಲಾಖೆ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next