Advertisement

ಟ್ವಿಟರ್‌ನಿಂದ ಲಿಖಿತ ಕ್ಷಮೆ

11:54 PM Nov 18, 2020 | mahesh |

ಹೊಸದಿಲ್ಲಿ: ಲಡಾಖ್‌ ಅನ್ನು ಚೀನದ ಭಾಗವೆಂದು ತೋರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಟ್ವಿಟರ್‌ ಕ್ಷಮೆ ಯಾಚಿಸಿದೆ. ಮಾಹಿತಿ ಸಂರಕ್ಷಣೆ ಮಸೂದೆ ಪರಿಶೀಲಿಸುವ ಸಂಸತ್‌ನ ಸ್ಥಾಯಿ ಸಮಿತಿ ಟ್ವಿಟರ್‌ನ ಚೀಫ್ ಪ್ರೈವೆಸಿ ಆಫೀಸರ್‌ ಡ್ಯಾಮಿನ್‌ ಕೆರಿಯನ್‌ ಸಹಿ ಮಾಡಿರುವ ಲಿಖಿತ ಕ್ಷಮಾಪಣೆ ಪತ್ರ ಸಮಿತಿಗೆ ತಲುಪಿದೆ ಎಂದು ಅದರ ಅಧ್ಯಕ್ಷೆ ಮೀನಾಕ್ಷಿ ಲೇಖೀ ಹೇಳಿದ್ದಾರೆ.

Advertisement

ಕಳೆದ ತಿಂಗಳು ಟ್ವಿಟರ್‌ ಪ್ರಕಟಿಸಿದ್ದ ನಕ್ಷೆಯಲ್ಲಿ ಲಡಾಖ್‌ ಚೀನದ ಭಾಗ ಎಂದು ತೋರಿಸಿತ್ತು. ಸಂಸದೀಯ ಸಮಿತಿ ಟ್ವಿಟರ್‌ನ ಈ ನಡೆಯನ್ನು ಕ್ರಿಮಿನಲ್‌ ಅಪರಾಧವೆಂದು ಕರೆದದ್ದಷ್ಟೇ ಅಲ್ಲದೇ, ಭಾರತೀಯರ ಭಾವನೆಗಳಿಗೆ ಧಕ್ಕೆತರುವ ಕೃತ್ಯವೆಂದು ಟೀಕಿಸಿ ಅಫಿಡವಿಟ್‌ ರೂಪದಲ್ಲಿ ವಿವರಣೆ ನೀಡುವಂತೆ ಟ್ವಿಟರ್‌ಗೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next