Advertisement
ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಪತನಗೊಳ್ಳು ತ್ತಿರುವ ನಡುವೆಯೇ ಶನಿವಾರ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ(ಭಾರತೀಯ ಷೇರುಗಳು ಮತ್ತು ವಿನಿಮಯ ಮಂಡಳಿ) ಹೊರಡಿಸಿದ ಪ್ರಕಟನೆಯಲ್ಲಿನ ಅಂಶಗಳಿವು.
Related Articles
20 ಸಾವಿರ ಕೋಟಿ ರೂ.ಗಳ ಎಫ್ಪಿಒ ವಾಪಸ್ ಪಡೆಯುವ ಅದಾನಿ ಗ್ರೂಪ್‌ನ ನಿರ್ಧಾರದಿಂದಾಗಿ ಭಾರತದ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರುಚ್ಚರಿಸಿದ್ದಾರೆ. ಶನಿವಾರ ಮಾತನಾಡಿದ ಅವರು “ಎಫ್ಪಿಒಗಳು ಬರುತ್ತವೆ ಹೋಗುತ್ತವೆ. ಇಂಥ ಏರಿಳಿತಗಳು ಎಲ್ಲ ಮಾರುಕಟ್ಟೆಗಳಲ್ಲೂ ಸಾಮಾನ್ಯ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಕಳೆದ 2 ದಿನಗಳಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ 8 ಶತಕೋಟಿ ಡಾಲರ್‌ನಷ್ಟು ಹೆಚ್ಚಳವಾಗಿದೆ. ಇದು ನಮ್ಮ ದೇಶದ ಆರ್ಥಿಕ ಸದೃಢತೆಗೆ ಸಾಕ್ಷಿ’ ಎಂದು ತಿಳಿಸಿದ್ದಾರೆ.
Advertisement
ಬಾಂಡ್ ಮಾರಾಟವನ್ನೂ ಕೈಬಿಟ್ಟ ಅದಾನಿ?ಎಫ್ಪಿಒ(ಫಾಲೋ ಆನ್ ಪಬ್ಲಿಕ್ ಆಫರ್) ವಾಪಸ್ ಪಡೆದ ಎರಡೇ ದಿನಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿ. ತನ್ನ ಬಾಂಡ್ ಮಾರಾಟ ಯೋಜನೆಯನ್ನು ಕೂಡ ಕೈಬಿಟ್ಟಿದೆ. ಮೊತ್ತ ಮೊದಲ ಬಾರಿಗೆ ಬಾಂಡ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ 1,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಕಂಪೆನಿ ಯೋಜಿಸಿತ್ತು. ಹೀಗೆ ಸಂಗ್ರಹವಾದ ಹಣವನ್ನು ತನ್ನ ಹೊಸ ಏರ್‌ಪೋರ್ಟ್, ಬಂದರು, ವಿದ್ಯುತ್ ಸ್ಥಾವರ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಬಳಸುವುದು ಕಂಪೆನಿಯ ಲೆಕ್ಕಾಚಾರವಾಗಿತ್ತು. ಆದರೆ ಹಿಂಡನ್‌ಬರ್ಗ್ ವರದಿ ಬಳಿಕ ಕಂಪೆನಿಯ ಷೇರುಗಳು, ಮಾರುಕಟ್ಟೆ ಮೌಲ್ಯ ಪತನಗೊಂಡ ಕಾರಣ ಈಗ ಅದು ಬಾಂಡ್ ಮಾರಾಟ ನಿರ್ಧಾರದಿಂದಲೂ ಹಿಂದಕ್ಕೆ ಸರಿದಿದೆ ಎಂದು ಹೇಳಲಾಗಿದೆ.