Advertisement
ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಈ ಹಿಂದೆ ಸಿದ್ಧಪಡಿಸಲಾಗಿದ್ದ ವಿಧೇಯಕದ ಸಾಧಕ ಬಾದಕಗಳ ಪರಾಮರ್ಶೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಈ ಕಾಯ್ದೆ ಜಾರಿಗೆ ತರುವ ಪೂರ್ಣ ಬದ್ಧತೆ ನನಗೆ ಈಗಲೂ ಇದೆ. ಈ ಮೌಡ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರದ ಅವಧಿಯಲ್ಲೇ ಮೌಡ್ಯಪ್ರತಿಬಂಧಕ ಕಾಯ್ದೆ ಜಾರಿಗೆ ತರಲಾಗುವುದು,” ಎಂದು ಹೇಳಿದರು.
Related Articles
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಗರದಲ್ಲಿ ನಡೆಯಿತು.
Advertisement
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸೀಮೆಎಣ್ಣೆ ತುಂಬಿದ್ದ ಡಬ್ಬ ಹಿಡಿದು ಅಂಬೇಡ್ಕರ್‌ಗೆ ಜೈಕಾರ ಹಾಕುತ್ತಾ ವೇದಿಕೆ ಮುಂಭಾಗಕ್ಕೆ ಆಗಮಿಸಿದ ಪರಶುರಾಮ ಎಂಬುವರು,
“ನನಗೆ ಕೆಎಎಸ್ ಪರೀಕ್ಷೆಯಲ್ಲಿ ಅನ್ಯಾಯವಾಗಿದೆ. ಅನ್ಯಾಯ ಸರಿಪಡಿಸಿ ಇಲ್ಲದಿದ್ದರೆ ಇಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅವರ ಬಳಿ ಇದ್ದ ಸೀಮೆಎಣ್ಣೆ ಡಬ್ಬ ವಶಪಡಿಸಿಕೊಂಡು, ಅವರನ್ನು ಸಭಾಂಗಣದಿಂದ ಹೊರಗಡೆಗೆ ಕರೆದೊಯ್ದರು.
ಹಿಂದೆ ಮುಂದೆ ಗೊತ್ತಿಲ್ಲದ ಈಶ್ವರಪ್ಪನ “ಹಿಂದ’“ಈಶ್ವರಪ್ಪನಿಗೆ ಹಿಂದೆನೂ ಗೊತ್ತಿಲ್ಲ ಮುಂದೆನೂ ಗೊತ್ತಿಲ್ಲ. ಆದರೆ, ನಾನು “ಅಹಿಂದ’ ಎಂದರೆ, ಅವರು “ಹಿಂದ’ ಅಂತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಕೆಲ ವಿಚಾರಗಳಲ್ಲಿ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಉದಾಹರಣೆಗೆ ನಾನು ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರತಿಪಾದಿಸುತ್ತೇನೆ. ಇಲ್ಲಿಗೆ ಬರುವ ಜನರು ಅಂಬೇಡ್ಕರ್ ಅವರ ವಿಚಾರಗಳನ್ನು ವಿರೋಧಿಸುವ ಕಾರ್ಯಕ್ರಮಗಳಿಗೂ ಹೋಗ್ತಾರೆ. ನಾನು “ಅಹಿಂದ’ ಎಂದಾಗ ಚಪ್ಪಾಳೆ ತಟ್ಟುವವರೇ ಹೋಗಿ ಈಶ್ವರಪ್ಪ “ಹಿಂದ’ ಎಂದಾಗಲೂ ಚಪ್ಪಾಳೆ ತಟ್ಟುತ್ತಾರೆ. ಅವರಿಗೆ ಹಿಂದೆನೂ ಗೊತ್ತಿಲ್ಲ ಮುಂದೆನೂ ಗೊತ್ತಿಲ್ಲ. ಸಿಎಂಗೆ ಆದ ಮೌಡ್ಯದ ಅನುಭವ
ಕಾಗೆ ಕಥೆ: “ಮೌಡ್ಯಗಳ ಬಗ್ಗೆ ಸ್ವತಃ ನನಗೇ ಅನುಭವಗಳಾಗಿವೆ. ಕೆಲ ದಿನಗಳ ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದು ಎಲ್ಲರಿಗೂ ಗೊತ್ತು. ವಿಚಿತ್ರವೆಂದರೆ ಅಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ಆದರೆ, ಕಾಗೆ ಕೂತಿದ್ದರಿಂದಲೇ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗಿ ಬಿಂಬಿಸಲಾಯಿತು. ಇನ್ನು ಕಾರು ಹಳೆಯದಾಗಿದ್ದರಿಂದ ಬದಲಿಸಿದೆ. ಅದಕ್ಕೂ ಕಾಗೆ ಕೂತಿದ್ದರಿಂದ ಕಾರು ಬದಲಿಸಿದರು ಎಂದರು. ಕೆಳಗಿಳಿಯೋ ಕಥೆ: “ಕಳೆದ ವರ್ಷ ಟಿವಿಯಲ್ಲಿ ಒಬ್ಬ ಜ್ಯೋತಿಷಿ “ಸಿದ್ದರಾಮಯ್ಯ ಈ ಬಾರಿ ಬಜೆಟ್ ಮಂಡಿಸುವುದೇ ಇಲ್ಲ’ ಎಂದ. ಇನ್ನೊಬ್ಬ “ಬಜೆಟ್ ಮಂಡಿಸಿದ ಮರುಗಳಿಗೆಯೇ ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಾರೆ’ ಎಂದ. ಇದನ್ನು ನೋಡಿದ ನನ್ನ ಹೆಂಡತಿ “ಏನ್ರೀ ಇವೆಲ್ಲಾ… ಹಿಂಗೆ ಹೇಳ್ತಿದ್ದಾರೆ,’ ಅಂದ್ರು. “ಅವರನ್ನೆಲ್ಲಾ ನಂಬಬೇಡ,’ ಅಂದೆ. ಜ್ಯೋತಿಷಿಗಳು ಹಾಗೆ ಹೇಳಿದ ನಂತರ ಮತ್ತೂಂದು ಬಜೆಟ್ ಮಂಡಿಸಿದ್ದೇನೆ. ಈ ಬಾರಿ ಮತ್ತು ಮುಂದಿನ ವರ್ಷವೂ ಬಜೆಟ್ ಮಂಡಿಸುತ್ತೇನೆ. ಪೂರ್ಣಾವಧಿ ಮುಖ್ಯಮಂತ್ರಿಯಾಗಿಯೂ ಅಧಿಕಾರ ಪೂರೈಸುತ್ತೇನೆ,” ಎಂದು ಹೇಳಿದರು.