Advertisement

ಎಪಿಎಂಸಿ ಅಭಿವೃದ್ಧಿಗೆ ಬದ್ಧ: ಮಂಡಿಮಠ

11:15 AM Aug 23, 2020 | Suhan S |

ಚಳ್ಳಕೆರೆ: ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿ 64 ವರ್ಷಗಳು ಕಳೆದಿದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದದೆ ಆದಾಯದಲ್ಲೂ ಸಹ ಕೊರತೆಯನ್ನು ಅನುಭವಿಸುತ್ತಿದೆ. ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರೊಂದಿಗೆ ಚರ್ಚಿಸಿ ವಿಶೇಷ ಅನುದಾನದಡಿ ಮಾರುಕಟ್ಟೆಗೆ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಎಪಿಎಂಸಿ ನೂತನ ಅಧ್ಯಕ್ಷ ಡಿ. ಸೋಮಶೇಖರ ಮಂಡಿಮಠ ತಿಳಿಸಿದರು.

Advertisement

ಶುಕ್ರವಾರ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಎಪಿಎಂಸಿಯ 51ನೇ ಅಧ್ಯಕ್ಷರಾಗಿ ಅ ಧಿಕಾರ ಸ್ವೀಕರಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ವರ್ತಕನಾಗಿದ್ದು ಇಲ್ಲಿನ ಸಮಸ್ಯೆಯ ಬಗ್ಗೆ ಹೆಚ್ಚು ಅರಿವಿದೆ. ಸುಮಾರು 30 ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರ ವರ್ಗ ನಿವೇಶನ ಸೇರಿದಂತೆ ಮೂಲಭೂತ ಸಮಸ್ಯೆಗಳಿಂದ ನೊಂದಿದೆ. ದಲ್ಲಾಲರೂ ಸಹ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದಾರೆ. ಖರೀದಿದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಹಿನ್ನೆಲೆಯಲ್ಲಿ ನೂತನ ಸಮಿತಿಯ ಎಲ್ಲಾ ನಿರ್ದೇಶಕರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಉಪಾಧ್ಯಕ್ಷ ಸಿ.ಬಿ.ಮೋಹನ್‌, ವರ್ತಕರ ಕ್ಷೇತ್ರದಿಂದ ಆಯ್ಕೆಯಾದ ಡಿ.ಎಂ. ತಿಪ್ಪೇಸ್ವಾಮಿ ಮಾತನಾಡಿದರು. ಬಿಜೆಪಿ ಆಡಳಿತದಲ್ಲಿ ಇದೇ ಮೊದಲ ಬಾರಿ ಇಲ್ಲಿನ ಮಾರುಕಟ್ಟೆಗೆ ಒಂದೇ ಹಂತದಲ್ಲಿ ಬಿಜೆಪಿಯ 17 ಜನ ನಿರ್ದೇಶಕರನ್ನು ಆಯ್ಕೆ ಮಾಡಿ ಅದರಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ನಿಗದಿ ಮಾಡಿದೆ.ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ, ತಳಕು-ನಾಯಕನಹಟ್ಟಿ ಮಂಡಲಾಧ್ಯಕ್ಷ ಈ. ರಾಮರೆಡ್ಡಿ, ಎಚ್‌.ವಿ. ಪ್ರಕಾಶ್‌ ರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಇಂದುಮತಿ, ಜಗದಾಂಬ ಜಗದೀಶ್‌, ದೇವರಾಜರೆಡ್ಡಿ, ಭರತೇಶ್‌ ರೆಡ್ಡಿ, ಸಿ.ಬಿ. ಆದಿಭಾಸ್ಕರ ಶೆಟ್ಟಿ ನೂತನ ನಿರ್ದೇಶಕರನ್ನು ಅಭಿನಂದಿಸಿದರು. ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌, ಕಾರ್ಯದರ್ಶಿ ಬಸವರಾಜು, ಎಪಿಎಂಸಿ ನಿರ್ದೇಶಕರಾದ ಟಿ.ಎಸ್‌. ತಿಪ್ಪೇಸ್ವಾಮಿ, ಸಿ.ಎಸ್‌. ಪ್ರಸಾದ್‌, ಬಿ.ವಿ. ಸಿರಿಯಣ್ಣ, ಎಸ್‌. ಯಲ್ಲಪ್ಪ, ಟಿ. ಗೋವಿಂದಪ್ಪ, ಟಿ. ದೇವರಹಳ್ಳಿ ಬ್ರಹ್ಮಾನಂದ ರೆಡ್ಡಿ, ಕೆ. ವರಲಕ್ಷ್ಮಿ, ಅಂಬಿಕಾ, ಡಿ.ವಿ.ಕೆ ಸ್ವಾಮಿ, ಕೆ. ನಿಂಗಣ್ಣ, ವೆಂಕಟೇಶ, ಬಿ.ಸಿ. ವೆಂಕಟೇಶಮೂರ್ತಿ, ಕೆ. ರುದ್ರಮುನಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next