Advertisement
ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರಗಾಮಿಗಳು ದಾಳಿ ನಡೆಸಿದ ಅನಂತರ, ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಸಂಬಂಧವನ್ನೇ ಐಸಿಸಿ ಕಡಿದುಕೊಳ್ಳಬೇಕೆಂಬ ಅಸಾಧ್ಯ ಬೇಡಿಕೆಯನ್ನು ಬಿಸಿಸಿಐ ಮುಂದಿಟ್ಟಿದೆ. ಲೆಕ್ಕಾಚಾರಗಳ ಪ್ರಕಾರ ಐಸಿಸಿ ಇಂತಹ ಪ್ರಸ್ತಾವವನ್ನು ಒಪ್ಪುವುದು ಸಾಧ್ಯವೇ ಇಲ್ಲ. ಭಯೋತ್ಪಾದನೆ ಪಾಕಿಸ್ಥಾನ ಸರ್ಕಾರದ ಅಧಿಕೃತ ನೀತಿಯಾಗಬೇಕು ಅಥವಾ ಸಿರಿಯಾ ಮಟ್ಟಕ್ಕೆ ಅಲ್ಲಿನ ಪರಿಸ್ಥಿತಿ ಕೆಟ್ಟು ಹೋಗಬೇಕು, ಆಗ ಮಾತ್ರ ಐಸಿಸಿ ನಿಷೇಧ ಹೇರಲು ಸಾಧ್ಯ. ಸದ್ಯ ಆ ಬೇಡಿಕೆಯಿಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.