Advertisement

ಆಯುಕ್ತರು, ಡಿಸಿಪಿಯ ಕ್ಷಮೆ ಯಾಚಿಸಿದ್ದೇನೆ

08:54 PM Oct 09, 2019 | Lakshmi GovindaRaju |

ಮೈಸೂರು: ಚಾಮುಂಡಿಬೆಟ್ಟದಲ್ಲಿ ನಡೆದ ಘಟನೆ ಬಗ್ಗೆ ನಗರ ಪೊಲೀಸ್‌ ಆಯುಕ್ತರು ಹಾಗೂ ಡಿಸಿಪಿ ಅವರ ಬಳಿ ನಾನೇ ಕ್ಷಮೆ ಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರೆಯಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ.

Advertisement

ಆದರೆ, ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಮುನ್ನಾ ದಿನ ಮಹಿಷಾ ದಸರಾ ಹೆಸರಲ್ಲಿ ದೇವಿಗೆ ಬಯ್ಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಅದರಿಂದ ಮನಸ್ಸಿಗೆ ನೋವಾಗಿ ನಾನು ಆ ರೀತಿ ಮಾತನಾಡಿದ್ದೆ.

ನನ್ನ ಮಾತಿನ ಬಗ್ಗೆ ನಾನೇ ಖುದ್ದಾಗಿ ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್‌ ಅವರಲ್ಲಿ ಕ್ಷಮೆ ಯಾಚಿಸಿದ್ದೇನೆ. ನಾವೆಲ್ಲ ಒಂದು ಕುಟುಂಬದವರಂತೆ ಕೆಲಸ ಮಾಡಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

ಮುಂದಿನ ಮೂರು ವರ್ಷ ಕೂಡ ಸೋಮಣ್ಣ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುತ್ತಾರೆ. ದಸರಾ ಯಶಸ್ಸಿನಿಂದ ಖುಷಿಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೋಮಣ್ಣ ಅವರಿಗೆ ಮುಂದಿನ ದಸರಾವನ್ನೂ ನೀನೇ ಮಾಡು ಎಂದಿದ್ದಾರೆ. ಹಾಗಾಗಿ ಮುಂದಿನ ದಸರಾವನ್ನೂ ಸೋಮಣ್ಣ ಅವರ ಉಸ್ತುವಾರಿಯಲ್ಲೇ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next