Advertisement

ಗ್ರಾಮ ಪಂಚಾಯತ್‌ ಚುನಾವಣೆಗೆ ಆಯೋಗ ಸಿದ್ಧತೆ; ಗುಂಪು ಪ್ರಚಾರ, ವಿಜಯೋತ್ಸವ ಮಾಡುವಂತಿಲ್ಲ!

12:28 AM Sep 04, 2020 | mahesh |

ಬೆಂಗಳೂರು: ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ… -ಇವು ಗ್ರಾಮ ಪಂಚಾಯತ್‌ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಚುನಾವಣ ಆಯೋಗ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯನಿರ್ವಹಣ ವಿಧಾನ (ಎಸ್‌ಒಪಿ)ಯ ಕರಡು ಮಾರ್ಗಸೂಚಿಗಳು.

Advertisement

ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ನಿಯಂತ್ರಣಕ್ಕೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಅದರಂತೆ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ತಜ್ಞರೊಂದಿಗೆ 2020ರ ಆ. 18ರಂದು ಚರ್ಚಿಸಿದ್ದು, ಅವರ ಸಲಹೆಗಳನ್ನು ಪರಿಗಣಿಸಿ ಎಸ್‌ಒಪಿ ರಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಪ್ರಮುಖ ಮಾರ್ಗಸೂಚಿಗಳು
ನಾಮಪತ್ರ ಸ್ವೀಕರಿಸುವ ಅಧಿಕಾರಿಗಳು ಮತ್ತು ಅಭ್ಯರ್ಥಿಗಳಿಗೆ ಸ್ಯಾನಿಟೈಸರ್‌ ಕಡ್ಡಾಯ.
ಮಾಸ್ಕ್ ಮತ್ತು ಕೈಗವಸು ಕಡ್ಡಾಯ. ಚುನಾವಣಾಧಿಕಾರಿ ಕಚೇರಿಯಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
ಸೋಂಕುಪೀಡಿತನಾಗಿದ್ದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು.
ಮತದಾನದ ದಿನ ಪುರುಷರು, ಮಹಿಳೆಯರ ಪ್ರತ್ಯೇಕ ಸರತಿ, ಸಾಮಾ ಜಿಕ ಅಂತರ ಇರಬೇಕು.
ಪ್ರಚಾರದ ವೇಳೆ ಗರಿಷ್ಠ 5 ಜನ ಮಾತ್ರ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪ್ರಚಾರ ಉತ್ತಮ.
ಮುದ್ರಿತ ಕರಪತ್ರ ಹಂಚುವವರಿಗೆ ಮಾಸ್ಕ್, ಗ್ಲೌಸ್‌, ಸ್ಯಾನಿಟೈಸರ್‌ ಕಡ್ಡಾಯ.
ಗುಂಪುಗುಂಪಾಗಿ ಪ್ರಚಾರ ಇಲ್ಲ. ಧ್ವನಿವರ್ಧಕ ಬಳಸುವಂತಿಲ್ಲ.
ಸೋಂಕುಪೀಡಿತ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಮಾಡಬಹುದು.
ಒಂದು ಮತಗಟ್ಟೆಗೆ ಗರಿಷ್ಠ 1 ಸಾವಿರ ಮತದಾರರು.
ಮತದಾನ ಮತ್ತು ಮತ ಎಣಿಕೆ ಕೊಠಡಿ ಸ್ಯಾನಿಟೈಸೇಶನ್‌ ಕಡ್ಡಾಯ.
ವಿಜೇತ ಅಭ್ಯರ್ಥಿಗಳಿಗೆ ದೃಢೀಕರಣ ಪತ್ರ ನೀಡುವಾಗ ಹಸ್ತಲಾಘವ ಇಲ್ಲ.
ವಿಜಯೋತ್ಸವ ಆಚರಿಸುವಂತಿಲ್ಲ.

ಪ್ರತ್ಯೇಕ ಮಾರ್ಗಸೂಚಿ
ಸೋಂಕುಪೀಡಿತರಿಗೂ ಮತ ಚಲಾಯಿಸುವ ಹಕ್ಕು ನೀಡಬೇಕಾಗಿ ರುವುದರಿಂದ ಆಸ್ಪತ್ರೆ ಅಥವಾ ಹೋಂ ಕ್ವಾರಂಟೈನ್‌ನಲ್ಲಿ ಇರುವರಿಗೆ ಅಂಚೆ ಮತಪತ್ರ ನೀಡುವ ಬಗ್ಗೆ ಅಯೋಗ ಪ್ರತ್ಯೇಕ ಆದೇಶ ಅಥವಾ ಮಾರ್ಗಸೂಚಿ ಹೊರಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next