Advertisement

ಆಯೋಗದ ಅವಧಿ 6 ವಾರ ವಿಸ್ತರಣೆ

08:51 AM Jan 17, 2018 | Team Udayavani |

ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಲು ಸರ್ಕಾರ ನೇಮಿಸಿರುವ ನ್ಯಾ. ಕೆ.ಎನ್‌. ಕೇಶವನಾರಾಯಣ ಅಧ್ಯಕ್ಷತೆಯ ಏಕ ವ್ಯಕ್ತಿ ನ್ಯಾಯಾಂಗ ಆಯೋಗದ ಅವಧಿಯನ್ನು ಫೆ.26ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

2016ರ ಜುಲೈನಲ್ಲಿ ಎಂ.ಕೆ. ಗಣಪತಿ ಆತ್ಮಹತ್ಯೆ ನಂತರ ಆರು ತಿಂಗಳ ಅವಧಿಗೆ ಸರ್ಕಾರ ನ್ಯಾ. ಕೇಶವ ನಾರಾಯಣ ಅಧ್ಯಕ್ಷತೆಯ ಆಯೋಗ ರಚನೆ ಮಾಡಿತ್ತು. ನಂತರ ಮೂರು ಬಾರಿ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಆಯೋಗದ ಅಧ್ಯಕ್ಷರ ಮನವಿ ಮೇರೆಗೆ ಸರ್ಕಾರ ಮತ್ತೆ ಆರು ವಾರಗಳವರೆಗೆ ಆಯೋಗದ ಅವಧಿ ವಿಸ್ತರಿಸಿದೆ. ಅವಧಿ ವಿಸ್ತರಣೆ ಬಗ್ಗೆ ನ್ಯಾಯಾಂಗ ಆಯೋಗದ ಮುಖ್ಯಸ್ಥರಾದ ನ್ಯಾ. ಕೇಶವನಾರಾಯಣ ಅವರು ಮಾಹಿತಿ ನೀಡಿ, ಗಣಪತಿ ಸಾವಿನ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ. ವರದಿ ಸಿದ್ಧಪಡಿಸಲಾಗುತ್ತಿದ್ದು ಅಂತಿಮ ಹಂತದಲ್ಲಿದೆ. ಫೆ.15ರ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ” ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next