Advertisement

Karnataka Election 2023: ಸ್ಟಾರ್‌ ಪ್ರಚಾರಕ ಪಟ್ಟಿ ಕೇಳಿದ ಆಯೋಗ

11:11 PM Apr 07, 2023 | Team Udayavani |

ಬೆಂಗಳೂರು: ಚುನಾವಣೆಗೆ ತಾರಾ ಪ್ರಚಾರಕರ ಪಟ್ಟಿ ಸಲ್ಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣ ಆಯೋಗ ಸೂಚಿಸಿದೆ. ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ 40 ತಾರಾ ಪ್ರಚಾರಕರು ಮತ್ತು ನೋಂದಾಯಿತ ಹಾಗೂ ಮಾನ್ಯತೆ ಹೊಂದಿಲ್ಲದ ರಾಜಕೀಯ ಪಕ್ಷಗಳಿಗೆ 20 ತಾರಾ ಪ್ರಚಾರಕರಿಗೆ ಪರವಾನಿಗೆ ನೀಡಲು ಅವಕಾಶವಿದೆ. ಅದರಂತೆ ತಮ್ಮ ಪಕ್ಷಗಳ ತಾರಾ ಪ್ರಚಾರಕ ಪಟ್ಟಿ ಒದಗಿಸುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣ ಆಯೋಗ ಪತ್ರ ಬರೆದಿದೆ.

Advertisement

ಚುನಾವಣೆಗೆ ಎ. 13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಧಿಸೂಚನೆ ಹೊರಡಿಸಿದ 7 ದಿನಗಳ ಒಳಗಾಗಿ ತಾರಾ ಪ್ರಚಾಕರ ಪಟ್ಟಿಯನ್ನು ಕೇಂದ್ರ ಚುನಾವಣ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಒದಗಿಸಬೇಕು. ಬಳಿಕ ಬರುವ ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next