Advertisement
ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್, ಪೆಟ್ರೋಲ್ ಸೇರ್ಪಡೆ, ದರ ಇಳಿಕೆ, ಏಕರೂಪ ದರ ನಿಗದಿ, ಥರ್ಡ್ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕಡಿತ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊàರ್ಟ್ ಏಜೆಂಟರ ಸಂಘದ ನೇತೃತ್ವದಲ್ಲಿ ಬಸ್, ಮಿನಿಗೂಡ್ಸ್, 3 ಮತ್ತು 4 ಚಕ್ರಗಳ ವಾಹನ, ಟ್ಯಾಕ್ಸಿ ಮಾಲೀಕರು, ಚಾಲಕರು ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ವರ್ಷಕ್ಕೆ 20 ಸಾವಿರ ಕೋಟಿ ಟೋಲ್ ಶುಲ್ಕ ಪಾವತಿ ಮಾಡಲಾಗುತ್ತಿದೆ. ಬಸ್, ಲಾರಿ, ಕಾರು ಎಲ್ಲಾ ವಾಹನಗಳಿಂದ ಟೋಲ್ ಸಂಗ್ರಹ ನಿಲ್ಲಿಸುವ ಮೂಲಕ ಟೋಲ್‌ವುುಕ್ತ ಭಾರತ ಮಾಡಬೇಕು ಎಂದು ಒತ್ತಾಯಿಸಿದರು.
Related Articles
Advertisement
ಪೂರ್ವಭಾವಿ ಆದಾಯ (ಆದಾಯ ತೆರಿಗೆ ನಿಯಮ-44) ಕಾಯ್ದೆ ಪರಿವರ್ತನೆ, ಈ-ವೇ ಬಿಲ್ ಸಮಸ್ಯೆ ನಿವಾರಣೆ, ಮುಂಬೈನ ಜವಾಹರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್ ಡೆಲಿವಿರಿ ಪದ್ಧತಿ ರದ್ದು ಮತ್ತು ಬಂದರುಗಳಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊರ್ಟ್ ಏಜೆಂಟರ ಸಂಘದ ಗೌರವ ಅಧ್ಯಕ್ಷ ಜಿ. ನಾಗೋಜಿರಾವ್, ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ, ಖಜಾಂಚಿ ಮಲ್ಲಿಕಾರ್ಜುನ್, ಖಜಾಂಚಿ ಭೀಮಪ್ಪ, ಸೋಗಿ ಮಹಾಂತೇಶ್, ಇಮಾಂ, ಸ್ವಾಮಿ, ಸಿದ್ದೇಶ್, ಮಹಾಂತೇಶ್, ಜಯಣ್ಣ, 3 ಮತ್ತು 4 ಚಕ್ರಗಳ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಪಳನಿಸ್ವಾಮಿ ಇತರರು ಇದ್ದರು.