ನವದೆಹಲಿ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್ ದರ ಸೋಮವಾರ ಒಂದೇ ಬಾರಿಗೆ 266 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 19 ಕೆಜಿ ತೂಕದ ವಾಣಿಜ್ಯಿಕ ಎಲ್‌ಪಿಜಿ ಅಡುಗೆ ಸಿಲಿಂಡರ್‌ನ ಹಾಲಿ ದರ 1,795.19 ರೂ. ಆಗಿದ್ದು ಪರಿಷ್ಕೃತ ದರ 2,021 ರೂ. ಆಗಲಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್ ದರ ಹಾಲಿ 1,734 ರೂ.ಗಳಿಂದ 2 ಸಾವಿರ ರೂ.ಗಳಿಗೆ ಏರಿಕೆಯಾಗಿದೆ.
ಮುಂಬೈನಲ್ಲಿ 1,950 ರೂ., ಕೋಲ್ಕತಾದಲ್ಲಿ 2,073.50 ರೂ., ಚೆನ್ನೈನಲ್ಲಿ 2,133 ರೂ. ಆಗಲಿದೆ. ಗೃಹ ಬಳಕೆಗೆ ಬಳಕೆ ಮಾಡುವ 14 ಕೆಜಿ ತೂಕದ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಅದಕ್ಕೆ ಪೂರಕವಾಗಿ ಪೆಟ್ರೋಲ್, ಡೀಸೆಲ್ ದರ ಕೂಡ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:2 ತೈಲ ಕ್ಷೇತ್ರಗಳ ಶೇ.60 ಷೇರು ವಿದೇಶಿ ಕಂಪನಿಗಳಿಗೆ ಮಾರಾಟ?
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 41 ಪೈಸೆ ಏರಿಕೆಯಾಗಿ 113.56 ರೂ., ಪ್ರತಿ ಲೀಟರ್ ಡೀಸೆಲ್‌ಗೆ 41 ಪೈಸೆ ಏರಿಕೆಯಾಗಿ 104.50 ರೂ. ಏರಿಕೆಯಾಗಿದೆ.