Advertisement

LPG: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 21 ರೂ. ಏರಿಕೆ

09:30 PM Dec 01, 2023 | Pranav MS |

ನವದೆಹಲಿ: ಪ್ರಸಕ್ತ ವರ್ಷದ ಕೊನೆಯ ತಿಂಗಳ ಮೊದಲ ದಿನವೇ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರ 21 ರೂ.ಏರಿಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೋಟೆಲ್‌ಗ‌ಳಲ್ಲಿ ದರ ಏರಿಕೆಯ ಆತಂಕವೂ ಹೆಚ್ಚಾಗಿದೆ. 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ದರ ಚೆನ್ನೈನಲ್ಲಿ 1,968.5 ರೂ. ಆಗಿದೆ.

Advertisement

ಬೆಂಗಳೂರಿನಲ್ಲಿ 1,883 ರೂ. ಆಗಲಿದೆ. ಅಕ್ಟೋಬರ್‌ನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು 209 ರೂ. ಕಳೆದ ತಿಂಗಳ ಆರಂಭದಲ್ಲಿ 101 ರೂ. ಏರಿಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next