Advertisement

ಹಿಂದೋನ್‌ ವಿಮಾನ ನಿಲ್ದಾಣ: ಜೂನ್‌ ಅಂತ್ಯಕ್ಕೆ ವಾಣಿಜ್ಯ ಹಾರಾಟ ಕಾರ್ಯಾರಂಭ

10:07 AM May 29, 2019 | Sathish malya |

ಹೊಸದಿಲ್ಲಿ: ದಿಲ್ಲಿಗೆ ಸಮೀಪದಲ್ಲೇ ಇರುವ ಹಿಂದೋನ್‌ ವಿಮಾನ ನಿಲ್ದಾಣ ಇದೇ ಜೂನ್‌ ಅಂತ್ಯದೊಳಗೆ ವಾಣಿಜ್ಯ ಹಾರಾಟ ಕಾರ್ಯನಿರ್ವಹಣೆ ಆರಂಭಿಸಲಿದೆ. ರಕ್ಷಣಾ ಸಚಿವಾಲಯ ಇದಕ್ಕೆ ಬೇಕಾದ ಎಲ್ಲ ಅನುಮತಿಗಳನ್ನು ನೀಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಹಿಂದೋನ್‌ ವಿಮಾನ ನಿಲ್ದಾಣವು ಭಾರತೀಯ ವಾಯು ಪಡೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದೆ. ಅಂತೆಯೇ ಅವು ಇಲ್ಲಿ ಪೌರ ವಾಯು ಯಾನ ಸೇವಾ ಸೌಕರ್ಯವನ್ನು ರೂಪಿಸಿವೆ.

ಪ್ರಾದೇಶಿಕ ವಾಯು ಸಂಪರ್ಕ ಯೋಜನೆ (ಆರ್‌ಸಿಎಸ್‌) ಪ್ರಕಾರ ನಾಗರಿಕ ವಾಯು ಯಾನ ಸೇವಾ ಕಾರ್ಯ ಆರಂಭಿಸುವ ಗೋಧಾವತ್‌ ಎಂಟರ್‌ಪ್ರೈಸಸ್‌ ನ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next