Advertisement

ವಾಣಿಜ್ಯ ಬಳಕೆ ಸಿಲಿಂಡರ್‌ ದರ 25 ರೂ. ಹೆಚ್ಚಳ: ಹೊಸ ವರ್ಷದ ಆರಂಭದಲ್ಲೇ ದರ ಏರಿಕೆ ಬಿಸಿ

12:25 AM Jan 02, 2023 | Team Udayavani |

ಹೊಸದಿಲ್ಲಿ : ಹೊಸ ವರ್ಷದ ಆರಂಭದ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳವಾಗಿದೆ. ತತ್‌ಕ್ಷಣದಿಂದಲೇ ಅನ್ವಯವಾಗುವಂತೆ ರವಿವಾರ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ ದರವನ್ನು 25 ರೂ. ಏರಿಕೆ ಮಾಡಿವೆ.

Advertisement

ಇದರಿಂದಾಗಿ ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್‌ ದರ 1,685.50 ರೂ.ಗಳಾದರೆ ದಿಲ್ಲಿಯಲ್ಲಿ 1,769 ರೂ, ಮುಂಬಯಿಯಲ್ಲಿ 1,721 ರೂ. ಹಾಗೂ ಚೆನ್ನೈಯಲ್ಲಿ 1,971 ರೂ. ಆಗಲಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಳೆದ ವರ್ಷ ಒಟ್ಟು ನಾಲ್ಕು ಬಾರಿ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕಂಪೆನಿಗಳು ಹೆಚ್ಚಳ ಮಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next