Advertisement

ಆಶಾಕಿರಣ ಸಂಸ್ಥೆಯ ಸೇವಾ ಕಾರ್ಯಕ್ಕೆ ಶ್ಲಾಘನೀಯ

01:18 PM Nov 09, 2021 | Team Udayavani |

ಅಫಜಲಪುರ: ಸೇವೆ ಎನ್ನುವದೇ ದೊಡ್ಡ ಸಾಧನೆ. ಅದನ್ನು ಮನಸ್ಫೂರ್ತಿಯಾಗಿ ಮಾಡಿದಾಗ ಪರಮಾತ್ಮನಿಗೆ ಪ್ರೀಯವಾಗುತ್ತದೆ. ಇಂತದ್ದೇ ಕೆಲಸವನ್ನು ಆಶಾಕಿರಣ ಸೇವಾ ಸಂಸ್ಥೆ ಮಾಡುತ್ತಿದೆ. ಈ ಕಾರ್ಯ ಶ್ಲಾಘನೀಯ ಎಂದು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಮಳೇಂದ್ರ ಮಠದಲ್ಲಿ ಆಶಾಕಿರಣ ಸೇವಾ ಸಂಸ್ಥೆಯಿಂದ ನಡೆದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ, ನೇತ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಆಶಾಕಿರಣ ಸಂಸ್ಥೆ ಸಕ್ರಿಯವಾಗಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಈ ಸಂಸ್ಥೆ ಮುನ್ನಡೆಸುತ್ತಿರುವುದು ಖುಷಿಯ ವಿಚಾರ ಎಂದರು.

ಡಾ| ಶ್ರೀಶೈಲ ಪಾಟೀಲ ಮಾತನಾಡಿ, ಯುವಕರು ಈ ಕಾರ್ಯಕ್ರಮದಲ್ಲಿ ನೇತ್ರದಾನ ವಾಗ್ಧಾನ ಮಾಡಿದ್ದು ಮೆಚ್ಚುವಂತ ವಿಷಯ ಎಂದು ಹೇಳಿದರು. ಆಶಾಕಿರಣ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣೆ, ಬಡ ರೋಗಿಗಳಿಗೆ ಕನ್ನಡಕ ವಿತರಣೆ, ನೇತ್ರದಾನಿಗಳಿಗೆ ಕೃತಜ್ಞತಾ ಪತ್ರ ವಿತರಣೆ, ಪತ್ರಕರ್ತರು ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ಈ ವೇಳೆ ಸದಾಶಿವ ಮೇತ್ರೆ, ಶಂಕರರಾವ್‌ ಹುಲ್ಲೂರ, ಸುಪ್ರೀತ್‌ ಶಿವಾನಂದ ಹಸರಗುಂಡಗಿ ಹಾಗೂ 50ಕ್ಕೂ ಹೆಚ್ಚು ಜನ ನೇತ್ರದಾನ ಮಾಡಿ, ಕೃತಜ್ಞತಾ ಪ್ರಮಾಣ ಪತ್ರ ಪಡೆದರು. ಪ್ರಭುಗೌಡ ಪಾಟೀಲ, ಸಂತೋಷ ದಾಮಾ, ಚಿದಾನಂದ ಮಠ, ಸೀಮಾ ಬಬಲಾದ, ರಾಣಿ ಬುಕ್ಕೆಗಾರ, ಗಂಗಾ ಮಠ, ವಿದ್ಯಾವತಿ ಕಲಶೆಟ್ಟಿ ಬಡದಾಳ, ಪ್ರತಿಭಾ ಮಹೀಂದ್ರಕರ, ಸೌಮ್ಯಯ ಪಾಟ್ನೆ, ರಾಘವೇಂದ್ರ ಕಲಶೆಟ್ಟಿ ಬಡದಾಳ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next