Advertisement
ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಪ್ರಮುಖರ ಮನವಿಯನ್ನು ಪರಿಗಣಿಸಿ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸಿನ ಮೇರೆಗೆ ಕೆಆರ್‌ಐಡಿಎಲ್ ಯೋಜನೆಯಡಿ ಅಂಬಲಪಾಡಿ ಬೀಡು ಮಾರ್ಗ ಕುಂಜಗುಡ್ಡೆ ಅದಿಉಡುಪಿ ರಾಷ್ಟ್ರೀಯ ಹೆದ್ದಾರಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಂಪರ್ಕಿಸುವ ಸುಮಾರು 1 ಕಿ.ಮೀ. ಉದ್ದದ ಸಂಪರ್ಕ ರಸ್ತೆಗೆ 50 ಲ.ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಈ ರಸ್ತೆಯು ಅಂಬಲಪಾಡಿ ದೇಗುಲ ಸಂಪರ್ಕಿಸುವ ಬೀಡು ಮಾರ್ಗ, ಅಂಬಲಪಾಡಿ ಕುಂಜಗುಡ್ಡೆ ಪ್ರದೇಶದ ಸುಮಾರು 35 ಮನೆಗಳು ಹಾಗೂ ಅಂಬಲಪಾಡಿ ಗ್ರಾಮಾಂತರ ಪ್ರದೇಶದ ನೂರಾರು ಮನೆಗಳ ಗ್ರಾಮಸ್ಥರಿಗೆ ಅದಿಉಡುಪಿ ಮುಖ್ಯ ರಸ್ತೆಗೆ ಸಂಪರ್ಕ ಕೊಂಡಿಯಾಗಿದೆ. ಜತೆಗೆ ಮೀನು ಮಾರುಕಟ್ಟೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಕಾಂಕ್ರೀಟ್ ರಸ್ತೆ
ಇದು ಕಾಂಕ್ರೀಟ್ ರಸ್ತೆ ಆಗಿರಲಿದೆ. ಲಾಕ್‌ಡೌನ್ ಮುನ್ನವೇ ಕಾಮಗಾರಿಗೆ ಮೊತ್ತ ಬಿಡುಗಡೆಗೊಂಡಿತ್ತಾದರೂ ಕಾಮಗಾರಿ ಆರಂಭಗೊಂಡಿರಲಿಲ್ಲ. ಈಗ ಲಾಕ್‌ಡೌನ್ ಸಡಿಲವಾಗಿರುವ ಕಾರಣ ಕಾಮಗಾರಿ ಆರಂಭಗೊಂಡಿದೆ.
Related Articles
ಈ ಭಾಗದಲ್ಲಿ ಕೃಷಿ ಚಟು ವಟಿಕೆಯಲ್ಲಿ ಹಲವು ಮಂದಿ ತೊಡ ಗಿಸಿಕೊಂಡಿದ್ದಾರೆ. ಕೃಷಿ ಯಂತ್ರಗಳ ಸಾಗಾಟಕ್ಕೆ ಈ ರಸ್ತೆಯಿಂದಾಗಿ ಮತ್ತಷ್ಟು ಅನುಕೂಲವಾಗಲಿದೆ. ಆದಿಉಡುಪಿ ಸಂತೆ ಸಹಿತ ಮೀನು ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಈ ರಸ್ತೆ ಬಹು ಮುಖ್ಯ ವಾಗಿದೆ. ಸ್ಥಳೀಯರ ದ್ವಿಚಕ್ರ, ಚತುಷfಕ್ರ ವಾಹನಗಳಿಗೂ ಸಂಚರಿ ಸಲು ಈ ರಸ್ತೆಯು ಅನುಕೂಲ ಕಲ್ಪಿಸಲಿದೆ.
Advertisement
ಕಾಮಗಾರಿ ಆರಂಭ ಸಂಪರ್ಕ ರಸ್ತೆ ನಿರ್ಮಿಸುವ ಬಗ್ಗೆ ಸ್ಥಳೀಯರು ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಈಗ ಕಾಲ ಕೂಡಿ ಬಂದಿದ್ದು, ಅನುದಾನ ಮಂಜೂರುಗೊಂಡು ಕಾಮಗಾರಿಯೂ ನಡೆಯುತ್ತಿದೆ. ಇಲ್ಲಿಗೆ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಗಮನ ಹರಿಸಲಾಗುವುದು.
ಕೆ. ರಘುಪತಿ ಭಟ್, ಶಾಸಕರು