Advertisement

ಮಡಿಕೇರಿಯಲ್ಲಿ ಕಾರ್ಗಿಲ್ ಹುತಾತ್ಮ ಯೋಧರ ಸಂಸ್ಮರಣೆ

11:36 PM Jul 27, 2019 | sudhir |

ಮಡಿಕೇರಿ : ಕಾರ್ಗಿಲನ್ನು ಅತಿಕ್ರಮಿಸಿಕೊಂಡ ಪಾಕಿಸ್ತಾನವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯದ ವೀರೋಚಿತ ಗೆಲುವಿಗೆ ಎರಡು ದಶಕಗಳು ಸಂದ ಅಪೂರ್ವ ದಿನವನ್ನು, ನಗರದ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಹೃದಯ ಸ್ಪರ್ಶಿಯಾಗಿ ಆಚರಿಸಲಾಯಿತು. ಭಾರತೀಯರು ಮರೆಯಲಾಗದ ಕಾರ್ಗಿಲ್ ಯುದ್ಧ 1999ರ ಮೇ ತಿಂಗಳಿನಲ್ಲಿ ಆರಂಭಗೊಂಡು 74 ದಿನಗಳ ಕಾಲ ನಡೆದು, ಭಾರತೀಯ ಸೈನ್ಯ ತನ್ನ ಅಸಾಮಾನ್ಯ ಶೌರ್ಯ, ಪರಾಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಿತ್ತು. ಈ ಹಂತದಲ್ಲಿ ಮಡಿದ ಭಾರತದ ವೀರ ಯೋಧರಿಗೆ ನಗರದ ಯುದ್ಧ ಸ್ಮಾರಕ‌ದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ನಡೆದ‌ ಕಾರ್ಗಿಲ್ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆಯ ಮೂಲಕ ಗೌರವ ನಮನ ಸಲ್ಲಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಾನರರಿ ಸುಬೇದಾರ್‌ ಮೇಜರ್‌ ಆನಂದ್‌ ಅವರು, ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಸೈನಿಕ ಕಲ್ಯಾಣ ಮಂಡಳಿ ಜಂಟಿ ನಿರ್ದೇಶಕರಾದ ಗೀತಾ ಶೆಟ್ಟಿ, ಮೇಜರ್‌ ಒ.ಎಸ್‌.ಚಿಂಗಪ್ಪ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ನಗರಸಭಾ ಮಾಜಿ ಸದಸ್ಯರುಗಳಾದ ಅನಿತಾ ಪೂವಯ್ಯ, ಟಿ.ಎಸ್‌. ಪ್ರಕಾಶ್‌, ಬಿಜೆಪಿ ನಗರ ಕಾರ್ಯದರ್ಶಿ ಮನು ಮಂಜುನಾಥ್‌, ಕಡಗದಾಳು ಗಣೇಶ್‌, ಬಿ.ಎಂ. ರವಿ, ಅರುಣ್‌ ಕುಮಾರ್‌, ಬಜರಂಗ ದಳದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಹಿಂದೂ ಪರ ಸಂಘ‌ಟನೆಯ ಚಿ.ನಾ.ಸೋಮೇಶ್‌ ದಿನದ ಮಹತ್ವದ ಕುರಿತು ಮಾತನಾಡಿ ಭಾರತದ 527 ವೀರ ಯೋಧರು ಪ್ರಾಣಾರ್ಪಣೆಗೈದಿದ್ದು, ಅವರಲ್ಲಿ ಕೊಡಗಿನ ವೀರಯೋಧರೂ ಸೇರಿದ್ದಾರೆ ಎಂದು ತಿಳಿಸಿದರು.

ಜನರಲ್ ತಿಮ್ಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಕಾಲು ಕೆರೆದು ಯುದ್ಧಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಭಾರತೀಯ ಸೈನ್ಯ ಮಾಡಿತ್ತು ಎಂದರು.

Advertisement

ಫೀ| ಮಾ| ಮಾಣಿಕ್‌ ಷಾ ಅವರು ಭಾರತೀಯ ಸೈನ್ಯದ ನೇತೃತ್ವ ವಹಿಸಿದ್ದ ಅವಧಿಯಲ್ಲಿ ನಡೆದ ಯುದ್ಧದಲ್ಲಿ 90 ಸಾವಿರಕ್ಕೂ ಹೆಚ್ಚಿನ ಪಾಕಿಸ್ತಾನದ ಯೋಧರನ್ನು ಸೆರೆ ಹಿಡಿಯಲಾಗಿತ್ತಾದರು, ಇಚ್ಛಾಶಕ್ತಿಗಳ ಕೊರತೆಯಿಂದ ಬಿಡುಗಡೆ ಮಾಡಲಾಯಿತು ಎಂದವರು ಈ ಸಂದರ್ಭದಲ್ಲಿ ತಿಳಿಸಿದರು.

ದೇಶದ ವೀರಯೋಧರ ತ್ಯಾಗ ಬಲಿದಾನಗಳು ಎಂದಿಗೂ ವ್ಯರ್ಥವಾಗಿ ಹೋಗಬಾರದೆಂದು ಸೋಮೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next