Advertisement

ತ್ವರಿತವಾಗಿ ಹೆದ್ದಾರಿ ದುರಸ್ತಿ ಕಾರ್ಯಕ್ಕೆ ಆದೇಶ

04:40 PM Aug 07, 2021 | Team Udayavani |

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ ಕಾರ್ಯವನ್ನು ತ್ವರಿತ್ವ ಗತಿಯಲ್ಲಿ ಮಾಡಲು ಆದೇಶಿಸಲಾಗಿದ್ದು, ಇನ್ನೆರಡು ವಾರದೊಳಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಗೋಪಾಲಯ್ಯ ಹೇಳಿದರು.

Advertisement

ತಾಲೂಕಿನಲ್ಲಿ ನೆರೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ನೂತನ ಮುಖ್ಯಮಂತ್ರಿ ಬೊಮ್ಮಾಯಿ ರವರ ಆದೇಶದಂತೆ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಲೂರು ಹಾಗೂ ಸಕಲೇಶಪುರ ತಾಲೂಕಿಗೆ ಭೇಟಿ ನೀಡಿದ್ದೇನೆ.

ಮುಂಬೈನಿಂದ ಲಸಿಕೆ: ರಾಜ್ಯದಲ್ಲಿ ಕೋವಿಡ್‌3ನೇ ಅಲೆ ಬರುವ ಮುನ್ಸೂಚನೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆಸ್ಪತ್ರೆಗಳ ಅವಶ್ಯ ತಕ್ಕಂತೆ ವೆಂಟಿಲೇಟರ್‌ಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಸನ ಜಿಲೆಯಲ್ಲಿ ಕೋವಿಡ್‌ ಲಸಿಕೆಗಳಿಗಾಗಿ ಹೆಚ್ಚಿನ ಬೇಡಿಕೆಯಿದ್ದು ಈ ಹಿನ್ನೆಲೆಯಲ್ಲಿ ಮುಂಬೈನಿಂದ ಲಸಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

5 ಲಕ್ಷ ರೂ. ಪರಿಹಾರ: ಆಲೂರು, ಸಕಲೇಶಪುರ ತಾಲೂಕಿನಲ್ಲಿ ಮಳೆಯಿಂದ ಸಂಪೂರ್ಣ, ಭಾಗಶಃ ಹಾನಿಯಾಗಿರುವ ಮನೆಗಳಿಗೆ ಈಗಾಗಲೇ ಅವರ ಬ್ಯಾಂಕ್‌ ಖಾತೆಗಳಿಗೆ ತಾತ್ಕಾಲಿಕ ಪರಿಹಾರ ಹಣ ಹಾಕಲಾಗಿದೆ. ಸಂಪೂರ್ಣ ಹಾನಿಗೊಂಡಿರುವ ಮನೆಗಳಿಗೆ ಸರ್ಕಾರದಿಂದ 5 ಲಕ್ಷ ರೂ.ನೀಡಲಾಗುತ್ತದೆ ಎಂದರು.

ದುರಸ್ತಿಗೆ ಆದೇಶ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಇದೀಗ ಭೂ ಕುಸಿತ
ಉಂಟಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ವೇಗವಾಗಿ ದುರಸ್ತಿಗೆ ಆದೇಶಿಸಲಾಗಿದೆ. ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ ಸಭೆ ನಡೆಸಿ ದೆಹಲಿಗೆ ನಿಯೋಗವೊಂದನ್ನು ಕರೆದೊಯ್ದು ಕೇಂದ್ರ ಸಚಿವರ ಗಮನ ಸೆಳೆಯಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್‌.ಎಮ್‌.
ವಿಶ್ವನಾಥ್‌ಮಾತನಾಡಿ,ಮಲೆನಾಡಿನಕುರಿತುಅರಿವುಹೊಂದಿರುವ ಸುನೀಲ್‌ ಕುಮಾರ್‌ ಅಂತಹವರಿಗೆ ಅರಣ್ಯ ಖಾತೆ ನೀಡಬೇಕು. ಇದರಿಂದ ಕಾಡಾನೆ ಸಮಸ್ಯೆ ಬಗೆಹರಿಯಲು ಸಾಧ್ಯವಾಗುತ್ತದೆ ಎಂದರು.

Advertisement

ಇದನ್ನೂ ಓದಿ:ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌ ಕೊಲೆ ಯತ್ನ: ಮೂವರ ಬಂಧನ

ಸಚಿವರು ಹಾಗೂ ಅಧಿಕಾರಿಗಳ ತಂಡ ತಾಲೂಕಿನ ಬಾಳ್ಳುಪೇಟೆಯ ಸಿದ್ದಮ್ಮ, ಸರೋಜಾರ ಮನೆ ಕುಸಿದಿದ್ದು, ವೀಕ್ಷಿಸಿ ರಾಷ್ಟ್ರೀಯ ಹೆದ್ದಾರಿ 75 ದೋಣಿಗಾಲ್‌ ಸಮೀಪ ಭೇಟಿ ನೀಡಿ ಕುಸಿದು ಬಿದ್ದಿರುವ ಹೆದ್ದಾರಿ ದುರಸ್ತಿ ಕಾರ್ಯವನ್ನು ಸುರಿಯುವ ಮಳೆಯಲ್ಲೇ ವೀಕ್ಷಿಸಿದರು.ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಪಂ ಸಿಇಒ ಪರಮೇಶ್‌, ಎಸ್ಪಿ ಶ್ರೀನಿವಾಸ್‌ ಗೌಡ, ತಾಲೂಕು ಉಪವಿಭಾಗಾಧಿಕಾರಿ ಪ್ರತೀಕ್‌ ಬಾಂಜಿಢಜಿಲ್‌ ತಾಪಂ ಇಒ ಹರೀಶ್‌, ಡಿವೈಎಸ್‌ಪಿ ಅನಿಲ್‌ ಕುಮಾರ್‌ ಹಾಜರಿದ್ದರು.

ಕಳೆದ 2 ವರ್ಷಗಳಿಂದಕ್ಷೇತ್ರಕ್ಕೆಹೆಚ್ಚಿನಅನುದಾನ ನೀಡಬೆಕೆಂದು ಒತ್ತಾಯಿಸುತ್ತಾಬಂದಿದ್ದರೂ ಬಿಡುಗಡೆ ಮಾಡಿಲ್ಲ.ಈಗಲಾದರೂ ಪರಿಸ್ಥಿತಿ ಅವಲೋಕಿಸಿ ಸರ್ಕಾರ ತಾಲೂಕಿನಅಭಿವೃದ್ಧಿಗೆ 100 ಕೋಟಿಗೂಹೆಚ್ಚಿನ ವಿಶೇಷಅನುದಾನ ನೀಡಬೇಕು.
-ಎಚ್‌.ಕೆ.ಕುಮಾರಸ್ವಾಮಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next