Advertisement
ಜಪಾನಿನ ಅಕಾನೆ ಯಮಾಗುಚಿ ಎದುರಿನ ವನಿತಾ ಸಿಂಗಲ್ಸ್ ಪ್ರಶಸ್ತಿಹಣಾಹಣಿಯಲ್ಲಿ ಸಿಂಧು 15-21, 16-21 ನೇರ ಗೇಮ್‌ಗಳ ಸೋಲನುಭವಿಸಿದರು. ಇದು ಪ್ರಸಕ್ತ ಋತು ವಿನಲ್ಲಿ ಸಿಂಧು ಆಡಿದ ಮೊದಲ ಫೈನಲ್ ಆಗಿತ್ತು. 51 ನಿಮಿಷಗಳಲ್ಲಿ ಈ ಸ್ಪರ್ಧೆ ಮುಗಿಯಿತು.
Related Articles
ಸಿಂಧು ಫೈನಲ್ ಸೋಲಿಗೆ ಇದು ಮತ್ತೂಂದು ಸೇರ್ಪಡೆ. ವಿಶ್ವ ಚಾಂಪಿಯನ್‌ಶಿಪ್, ಏಶ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ಥಾಯ್ಲೆಂಡ್ ಓಪನ್, ಕಳೆದ ವರ್ಷದ ಇಂಡಿಯಾ ಓಪನ್ ಫೈನಲ್‌ಗಳಲ್ಲೂ ಸಿಂಧುಗೆ ಸೋಲೇ ಸಂಗಾತಿಯಾಗಿತ್ತು.
Advertisement
ನನ್ನಿಂದಲೇ ತಪ್ಪು ಸಂಭವಿಸಿತು“ಯಮಾಗುಚಿ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದರು. ಸುದೀರ್ಘ ರ್ಯಾಲಿಗಳು ಕಂಡುಬಂದವು. ಮೊದಲ ಗೇಮ್‌ನಲ್ಲಿ ಆಗಾಗ ಮುನ್ನಡೆ ಸಾಧಿಸಿದರೂ ನಾನೇ ಕೆಲವು ತಪ್ಪು ಮಾಡಿ ಎಡವಿದೆ. ಮೊದಲ ಗೇಮ್ ಗೆದ್ದದ್ದಿದ್ದರೆ ಫಲಿತಾಂಶ ಬೇರೆಯದೇ ಆಗುತ್ತಿತ್ತು’ ಎಂದು ಸಿಂಧು ಪ್ರತಿಕ್ರಿಯಿಸಿದರು. ಇದು ಅಕಾನೆ ಯಮಾಗುಚಿ ವಿರುದ್ಧ ಆಡಿದ 15 ಪಂದ್ಯಗಳಲ್ಲಿ ಸಿಂಧು ಅನುಭವಿಸಿದ ಕೇವಲ 5ನೇ ಸೋಲು. ಕೊನೆಯ ಸಲ ಸೋತದ್ದು ಕಳೆದ ವರ್ಷದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸೆಮಿಫೈನಲ್‌ನಲ್ಲಿ. ಹಾಗೆಯೇ ಇದು ಪ್ರಸಕ್ತ ಋತುವಿನಲ್ಲಿ ಯಮಾಗುಚಿ ಪಾಲಾದ 3ನೇ ಪ್ರಶಸ್ತಿ. ಅವರು ಜರ್ಮನ್ ಓಪನ್, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಕಿರೀಟ ಏರಿಸಿಕೊಂಡಿದ್ದರು.