ಈ ಬಾರಿಯ ನಾಲ್ಕು ದಿನಗಳ ಕೃಷಿ ಮೇಳ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ನಡೆಯುತ್ತಲಿದೆ. ಬೇಸಾಯ ಪದ್ಧತಿ, ಗೊಬ್ಬರ ಬಳಕೆ, ಕೀಟನಾಶಕಗಳು, ನೀರಾವರಿ, ಸಾವಯವ ಪದ್ಧತಿ ಸೇರಿದಂತೆ, ಕೃಷಿಗೆ ಸಂಬಂಧಪಟ್ಟ ಸಕಲ ಮಾಹಿತಿಯೂ ಇಲ್ಲಿ ಲಭ್ಯ. ಅಷ್ಟೇ ಅಲ್ಲ, ಯಂತ್ರೋಪಕರಣಗಳು, ಸಾವಯವ ಆಹಾರ ಉತ್ಪನ್ನಗಳು, ತಿನಿಸುಗಳ ಮಳಿಗೆ ಮತ್ತು ಮಾಹಿತಿ ಕೇಂದ್ರಗಳನ್ನು ಕೂಡಾ ಮೇಳದಲ್ಲಿ ತೆರೆಯಲಾಗಿದೆ.
ಪರಪ್ಪನ ಅಗ್ರಹಾರ ಸೇರಿದಂತೆ ಇತರೆ ಜೈಲುಗಳ ಕೈದಿಗಳು ಬೆಳೆದ ಹಣ್ಣು-ತರಕಾರಿಗಳನ್ನು ಮಾರಾಟಕ್ಕೆ ಇಟ್ಟಿರುವುದು ವಿಶೇಷ.
Krishimela 2019
Bengaluru ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡರೆ, ಕೃಷಿ ಮೇಳದ ಕೊನೆಯ ಎರಡು ದಿನಗಳಲ್ಲಿ ಏನೇನು ನೋಡಬಹುದು ಎಂಬ ಮಾಹಿತಿ ಸಿಗುತ್ತದೆ.
ಎಲ್ಲಿ?: ಜಿಕೆವಿಕೆ ಆವರಣ, ಹೆಬ್ಬಾಳ
ಯಾವಾಗ?: ಅ.27ರವರೆಗೆ