Advertisement
ಏನಿದು ಸೀಪ್ಲೇನ್?ಈ ವಿಮಾನದ ತಳಭಾಗದಲ್ಲಿ ದೋಣಿಯಂಥ ರಚನೆಯಿದ್ದು, ಅದರ ವಿಶಾಲವಾದ ಎರಡು ರೆಕ್ಕೆಗಳೂ ನೀರಿನಲ್ಲಿ ತೇಲಿಕೊಂಡು ಹಾಗೂ ನೀರನ್ನು ಸೀಳಿಕೊಂಡು ಮುನ್ನುಗ್ಗುವಂತೆ ನಿರ್ಮಿಸಲಾಗಿದೆ. ಮಿಕ್ಕ ವಿಮಾನಗಳಿಗೆ ಇರುವಂತೆ ಇವಕ್ಕೆ ಚಕ್ರಗಳಿಲ್ಲ ಎಂದು ತಿಳಿಯಬೇಡಿ. ಚಕ್ರಗಳಿರುತ್ತವೆ, ಆದರೆ ನೀರಿನ ಮೇಲೆ ಅದರ ಉಪಯೋಗವಿಲ್ಲದ್ದರಿಂದ ಅದು ಮಡಚಿದ ಸ್ಥಿತಿಯಲ್ಲಿರುತ್ತದೆ. ಭೂಮಿ ಮೇಲೆ ಇಳಿಸುವಾಗ ಮಾತ್ರ ಚಕ್ರಗಳು ತೆರೆದುಕೊಳ್ಳುತ್ತವೆ. ನೀರಿನ ಮೇಲೆ ಇಳಿಯುವಾಗ ಸ್ಕೇಟಿಂಗ್ ಮಾದರಿಯ ಬ್ಲೇಡುಗಳನ್ನು ಬಳಸಿಕೊಳ್ಳಲಾಗುತ್ತದೆ. ಹತ್ತು ಮಂದಿ ಕುಳಿತುಕೊಳ್ಳಬಹುದಾದ ಈ ವಿಮಾನವು ನದಿ, ಜಲಾಶಯ, ಸಮುದ್ರ, ದೊಡ್ಡ ಕೆರೆಗಳ ನೀರಿನ ಮೇಲೆಯೂ ಕಾರ್ಯಾಚರಿಸಬಲ್ಲದು.
1908ರಲ್ಲಿ ಸೀಪ್ಲೇನ್ ಪರಿಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಗೇಬ್ರಿಯಲ್‌ವಾಸಿನ್ ಹಾಗೂ ಹೆನ್ರಿ ಫಾರ್ಮಲ್ ಎಂಬುವವರು ಪರಿಚಯಿಸಿದರು. ಹಿಂದೆಲ್ಲಾ ಹಾಲಿವುಡ್ ಸಿನಿಮಾಗಳಲ್ಲಿ ಸೀಪ್ಲೇನ್‌ಗಳನ್ನು ರೋಚಕ ಸನ್ನಿವೇಶಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಭಾರತದಲ್ಲಿ ಇಂಥದ್ದೊಂದು ನೂತನ ಪ್ರಯತ್ನವನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕಾರಗೊಳಿಸಿದ್ದರು. ಅವರು ಸೀಪ್ಲೇನಿನಲ್ಲಿ ಅಹಮದಾಬಾದ್‌ನ ಸಾಬರಮತಿ ನದಿಯಿಂದ ಉತ್ತರ ಗುಜರಾತಿನ ಧರೋಜಿ ಅಣೆಕಟ್ಟಿನ ನೀರಿನ ಮೇಲೈಗೆ ಬಂದು ಯಶಸ್ವಿಯಾಗಿ ಇಳಿದಿದ್ದರು. ಮೂಲಕ ಸಾಕಾರಗೊಳಿಸಿತು. ಸೀಪ್ಲೇನ್ ವ್ಯವಸ್ಥೆಯನ್ನು ಭಾರತದಲ್ಲೆಡೆ ಅಳವಡಿಸುವುದರಿಂದ ದೇಶದ ಸಣ್ಣ ಸಣ್ಣ ಹಳ್ಳಿಗಳ ಕೃಷಿ ಉತ್ಪನ್ನಗಳನ್ನು ಅತ್ಯಂತ ಶೀಘ್ರವಾಗಿ ಬೃಹತ್ ಮಾರುಕಟ್ಟೆಗೆ ತಲುಪಿಸುವುದು, ಗುಡ್ಡಗಾಡು ಪ್ರದೇಶಗಳಿಗೆ ವೈಮಾನಿಕ ಸಾರಿಗೆ ವ್ಯವಸ್ಥೆ, ಮುಂತಾದ ಹತ್ತು ಹಲವು ಪ್ರಯೋಜನಗಳು ಸಿಗಲಿವೆ. ಸವಾಲುಗಳು ಅನೇಕ
ಸೀಪ್ಲೇನ್ ವ್ಯವಸ್ಥೆಯಿಂದ ಅನೇಕ ಉಪಯೋಗಗಳಿವೆ ನಿಜ. ಆದರೆ ಅನನುಕೂಲಗಳೂ ಇವೆ. ಈ ವಿಮಾನಗಳ ಹಾರಾಟದಿಂದ ಕೆರೆ, ಜಲಾಶಯ, ಅಣೆಕಟ್ಟುಗಳು ಮತ್ತು ನದಿಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಅಪಾಯವೂ ಇದೆ. ಜಲಚರಗಳ ಸಂತತಿಗಳ ಅಭಿವೃದ್ಧಿಗೂ ತೊಡಕಾಗಬಹುದು. ಪರಿಣಾಮವಾಗಿ ಸಾಂಪ್ರದಾಯಿಕ ಮೀನುಗಾರಿಕೆಗೂ ಸಮಸ್ಯೆಯಾಗಬಹುದು. ಅಲ್ಲದೆ ಪರಿಸರ ಮತ್ತು ಶಬ್ದಮಾಲಿನ್ಯವೂ ಉಂಟಾಗಬಹುದು. ಆದ್ದರಿಂದ ಅನೇಕ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಸೀಪ್ಲೇನ್ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಜರೂರತ್ತಿದೆ.
Related Articles
ಈ ವಿಮಾನಗಳು ಪುಟ್ಟದಾಗಿರುವುದರಿಂದ ಇದರಲ್ಲಿ ಫರ್ಸ್ಡ್ ಕ್ಲಾಸ್, ಎಕಾನಮಿ ಕ್ಲಾಸ್ ಎಂದು ಪ್ರತ್ಯೇಕ ಕ್ಯಾಬಿನ್ ಇರುವುದಿಲ್ಲ. ಪ್ರಯಾಣಿಕರೆಲ್ಲರೂ ಒಂದೇ. ಒಟ್ಟಿಗೆ ಎದುರು ಬದುರಾಗಿ ಕುಳಿತು ಪ್ರಯಾಣಿಸಬೇಕಾಗುತ್ತದೆ. ಒಂದೂರಿನಿಂದ ಇನ್ನೊಂದೂರಿಗೆ ಹೊರಡುವ ಟೆಂಪೋ ಹೇಗೋ ಅದೇ ರೀತಿ ಆಕಾಶಮಾರ್ಗದ ಟೆಂಪೋ ಎಂದು ಸೀಪ್ಲೇನನ್ನು ಕರೆಯಬಹುದು.
Advertisement
– ಸಂತೋಷ್‌ರಾವ್ ಪೆರ್ಮುಡ