ಶಿವನ ಕಣ್ಣೀರು ಭೂಮಿಯ ಮೇಲೆ ಬಿದ್ದಾಗ ರುದ್ರಾಕ್ಷದ ವೃಕ್ಷ ಹುಟ್ಟಿತು ಎಂದು ಹೇಳುತ್ತದೆ ಪುರಾಣ ಕತೆ. ರುದ್ರಾಕ್ಷವನ್ನು ಶಿವನ ಪ್ರಸಾದವೆಂದು ತಿಳಿಯುವವರು ಅದನ್ನು ಧರಿಸುವವರಿಗೆ ಅದ್ಭುತ ಶಕ್ತಿ, ಜ್ಞಾನ ಸಿಗುತ್ತದೆ ಎಂದೂ ನಂಬುತ್ತಾರೆ. ಸನಾತನ ಕಾಲದಿಂದಲೂ ಸಾಧು ಸಿದ್ಧರು, ಋಷಿ ಮುನಿಗಳು ಶಕ್ತಿಗಾಗಿ ಮತ್ತು ಬದುಕಿನಲ್ಲಿ ಉನ್ನತ ಶಿಖರಕ್ಕೇರಲು ಈ ದೈವೀಕ ಆಭರಣವನ್ನು ಧರಿಸುತ್ತಾ ಬಂದಿದ್ದಾರೆ. ರುದ್ರಾಕ್ಷದಲ್ಲಿ ಹಲವು ಬಗೆಗಳಿವೆ, ಅನೇಕ ರೀತಿ ರಿವಾಜುಗಳೂ ಇವೆ. ಹೀಗಾಗಿ ಯಾವುದನ್ನು, ಹೇಗೆ ಧರಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಬಹುದು. ಮಾರುಕಟ್ಟೆಯಲ್ಲಿ ನಕಲಿ ರುದ್ರಾಕ್ಷಿಗಲೂ ಲಭ್ಯವಿರುವುದರಿಂದ ಜನಸಾಮಾನ್ಯರಿಗೆ ಅಸಲಿ ಮತ್ತು ನಕಲಿ ಎರಡರ ನಡುವಿನ ವತ್ಯಾಸ ತಿಳಿಯದೆ ನಕಲಿಯನ್ನೇ ಅಸಲಿಯೆಂದುಕೊಂಡು ಖರೀದಿಸಬಹುದು. ಜನರ ಅನುಮಾನಗಳನ್ನು ನಿವಾರಿಸಿ, ಅಸಲಿ ರುದ್ರಾಕ್ಷವನ್ನು ಓದಗಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿದ್ದು ರುದ್ರ ಲೈಫ್ ಎಂಬ ಸಂಸ್ಥೆ.
ಇಲ್ಲಿ ತರಬೇತಿ ಹೊಂದಿರುವ ಕುಶಲಕರ್ಮಿಗಳಿಂದ ಸ್ಥಳದಲ್ಲೇ ಮಾಲೆಗಳನ್ನು ಉಚಿತವಾಗಿ ತಯಾರಿಸಿ ನೀಡಲಾಗುತ್ತದೆ. ಜೊತೆಗೆ ನಿಮ್ಮ ರುದ್ರಾಕ್ಷಿಗಳನ್ನು ಪರಿಣತರು ಪರೀಕ್ಷಿಸಿ ಕೊಡಲಿದ್ದಾರೆ. 1ರಿಂದ 21 ಮುಖೀವರೆಗಿನ ರುದ್ರಾಕ್ಷಿಗಳು ಇಲ್ಲಿ ಲಭ್ಯವಿದ್ದು, ವೈದಿಕರಿಂದ ಉಚಿತವಾಗಿ ಅಭಿಷೇಕವನ್ನೂ ನಡೆಸಿಕೊಡಲಾಗುತ್ತದೆ. ಅಂದಹಾಗೆ ಇಲ್ಲಿ ಮಾರಾಟಕ್ಕೆ ಲಭ್ಯವಿರುವ ರುದ್ರಾಕ್ಷ ಐಎಸ್‌ಒ ಮಾನ್ಯತೆಯನ್ನೂ ಪಡೆದಿದೆ.
ಎಲ್ಲಿ?: ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ, ಎಂ.ಜಿ. ರಸ್ತೆ ಮತ್ತು ಎಚ್.ಎಸ್.ಆರ್. ಲೇಔಟ್
ಯಾವಾಗ?: ಸೆ. 18ರವರೆಗೆ, ಬೆಳಗ್ಗೆ 10.30- ರಾತ್ರಿ 8