ಟ್ರಾವೆಲ್ ಅನ್ನೋದು ಮನುಷ್ಯರನ್ನು ಕತೆಗಾರರನ್ನಾಗಿಸುತ್ತದೆ ಎಂದು ಸಾಹಿತಿಯೊಬ್ಬರು ಹೇಳಿದ್ದರು. ಅದು ಸತ್ಯವಾದ ಮಾತು. ಸುತ್ತಾಟ ನಡೆಸುವವರನ್ನು ಮಾತಿಗೆ ಕೂರಿಸಿಕೊಂಡರೆ ಅವರು ತಾವು ಕಂಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ರೋಚಕವಾಗಿ ಹೇಳಿದಾಗ ಅದರ ಮಜವೇ ಬೇರೆ. ಅಂಥದ್ದರಲ್ಲಿ ಸುತ್ತಾಟ ನಡೆಸುವವರೆಲ್ಲರೂ ಒಂದೆಡೆ ಸೇರಿ ತನ್ನ ಕತೆಗಳನ್ನು ಹಂಚಿಕೊಳ್ಳುವಂತಾದರೆ ಎಷ್ಟು ಚೆನ್ನ ಅಲ್ವಾ? ಅಂಥದ್ದೊಂದು ವೇದಿಕೆ ಇಲ್ಲಿದೆ.
ವಾರಾಂತ್ಯ ಸತತ ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಕತೆ ಹೇಳಲು ಮಾತ್ರವೇ ಅಲ್ಲ, ಕತೆಗಳನ್ನು ಕೇಳಲೂ ಇಲ್ಲಿಗೆ ಬರಬಹುದು. ಈ ಬಾರಿಯ ವಿಷಯ- ಹೆಚ್ಚು ಪ್ರಸಿದ್ಧಿ ಪಡೆಯದ ಜಾಗಕ್ಕೆ ಹೋದಾಗ ಆದ ನಿಮ್ಮ ಅನುಭವ. ಇದರಿಂದ ಶ್ರೋತೃಗಳಿಗೆ ಹೊಸ ಜಾಗದ ಪರಿಚಯವೂ ಆಗಲಿದೆ.
-ಎಲ್ಲಿ?: ಡಯಲಾಗ್ಸ್ ಕೆಫೆ, ಜೆ.ಪಿ.ನಗರ
-ಯಾವಾಗ?: ಅ. 22, ಸಂಜೆ 4- 7
-ಶುಲ್ಕ: 150 ರೂ.