Advertisement
ಸುಲಿಗೆ ಮಾಡಿದ ಮೊಬೈಲ್‌ನಲ್ಲಿ ಜೂಮ್ ಕಾರು ಬುಕ್‌ಮಾಡಿ, ಬಳಿಕ ಅದೇ ಕಾರಿನಲ್ಲಿ ತೆರಳಿ ದರೋಡೆ ಮಾಡುತ್ತಿದ್ದರು. ಬಂಧಿತರಿಂದ 2 ಜೂಮ್ ಕಾರುಗಳು, 7 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು. ತಮ್ಮ ಚಾಲನಾ ಪರವಾನಗಿ ತೋರಿಸಿ ಬೇಕಾದ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ನಂತರ ದರೋಡೆ ಮಾಡಿದ ಮೊಬೈಲ್‌ನ ಸಿಮ್‌ಕಾರ್ಡ್ ಎಸೆದು, ಹೊಸ ಮೊಬೈಲ್‌ನಿಂದ ಮತ್ತೂಂದು ಜೂಮ್ ಕಾರು ಬುಕ್ ಮಾಡಿ ಕೃತ್ಯ ಎಸಗುತ್ತಿದ್ದರು. ಸಿಸಿಟಿವಿ ಕ್ಯಾಮೆರಾ ಕೊಟ್ಟ ಸುಳಿವು: ಕೆಲ ದಿನಗಳ ಹಿಂದೆ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಸುಕಿನ 4 ಗಂಟೆ ಸುಮಾರಿಗೆ ರಾಜಾಜಿನಗರಕ್ಕೆ ಬಸ್‌ನಲ್ಲಿ ಬಂದಿದ್ದು, ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
Related Articles
ಮಾಡಿ ಪರಾರಿಯಾಗಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement