Advertisement
ಗೋಲ್‌ಗುಂಬಜ್ ಮಾದರಿಯನ್ನು ಚಚ್ಚೌಕವಾಗಿ ನಾಲ್ಕು ಕಡೆ 30 ಅಡಿ ಅಗಲ ಹಾಗೂ ಒಟ್ಟಾರೆ 30 ಅಡಿ ಎತ್ತರದ ವಿಸ್ತೀರ್ಣದಲ್ಲಿ ಸುಮಾರು 4 ಲಕ್ಷ ಕೆಂಪು, ಬಿಳಿ, ಕೇಸರಿ ಹಾಗೂ ಹಳದಿ ಬಣ್ಣಗಳ ಗುಲಾಬಿ ಹೂಗಳಿಂದ ರೋಸ್‌ಗುಂಬಜ್ ನಿರ್ಮಿಸಲಾಗಿದೆ. ಈ ಪುಷ್ಪ ಸ್ಮಾರಕದ ಮುಂದೆ ಸುಂದರ ಉದ್ಯಾನವೊಂದು ನಿರ್ಮಾಣಗೊಳ್ಳಲಿರುವುದು ವಿಶೇಷ. ಏಳು ದಿನಗಳ ಕಾಲ 32 ನುರಿತ ನೌಕರರಿಂದ ರೂಪಗೊಂಡು, 52 ಜನ ಪುಷ್ಪ ಪರಿಣಿತರ ಪರಿಶ್ರಮದಿಂದ ವಿಕನಗೊಳ್ಳುವ ರೋಜ್‌ಗುಂಬಜ್ ನೋಡುಗರನ್ನು ಸೆಳೆಯಲಿವೆ.
Related Articles
Advertisement
ಹೊರಾಂಗಣ ವಿಶೇಷ: ಹುಲ್ಲುಹಾಸಿನ ಮೇಲೆ ಆಕರ್ಷಕ ಪೊಟೊನಿಯಾ ಹೂಗಳಿಂದ ಬೃಹತ್ ಹೂವಿನ ಜಲಪಾತ, ಕುಂಡದಲ್ಲಿ ಬೆಳೆದ ಹೂಗಳಿಂದ ರೂಪಿತವಾದ ನವಿಲಿನ ಪ್ರತಿರೂಪ, ಪ್ಲೋರಲ್ ಹಾರ್ಟ್ ಪರ್‌ಗೊಲಾಗಳು, ತೂಗು ಪುಷ್ಪಗಳು, ಬೆಳಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 3ರಿಂದ 6ಗಂಟೆಯವರೆಗೆ ಹಾಡುಗಾರಿಕೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ. ಡಾ.ಎಂ.ಎಚ್.ಮರಿಗೌಡ ಅವರು ನಡೆದು ಬಂದ ಹಾದಿ ಮತ್ತು ಸಾಧನೆ ಕುರಿತ ಬೃಹತ್ ಕುಠೀರ, ಲಾಲ್‌ಬಾಗ್ ತರಬೇತಿ ಕೇಂದ್ರದಿಂದ ಮಿನಿ ಲ್ಯಾಂಡ್ ಸ್ಕೇಪ್ ಮಾಡೆಲ್‌ಗಳು, ಸಸ್ಯಪ್ರೇಮಿಗಳಿಗಾಗಿ ಸಸ್ಯ ಸಂತೆ ನಡೆಯಲಿದೆ.
ಮುನ್ನೆಚ್ಚರಿಕೆ ಕ್ರಮ: ಕಳೆದ ತಿಂಗಳು ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಉದ್ಯಾನದೆಲ್ಲೆಡೆ ಇರುವ ಕಲ್ಲು ಕಂಬಗಳ ಪರಿಶೀಲನೆ ನಡೆಸಲಾಗಿದೆ. 67 ಕಂಬಗಳು ಅಸುರಕ್ಷಿತವಾಗಿರುವುದು ಕಂಡುಬಂದಿದ್ದು, ಅವುಗಳ ದುರಸ್ಥಿ ಮಾಡಲಾಗಿದೆ. ಲಾಲ್‌ಬಾಗ್ ಎಲ್ಲೆಡೆ 90ಕ್ಕೂ ಹೆಚ್ಚು ನಾಯಿಗಳಿವೆ. ಅವುಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಗಿಡ, ಮರಗಳು ಹೆಚ್ಚಾಗಿರುವ ಉದ್ಯಾನವನ ಇದಾಗಿರುವುದರಿಂದ ಹಾವುಗಳು ಕೂಡ ಇವೆ. ಹಾವು ಕಡಿತಕ್ಕೆ ಔಷಧ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿನ ನಾಲ್ಕು ದ್ವಾರದಲ್ಲೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ವಾಹನ ನಿಲುಗಡೆ ವ್ಯವಸ್ಥೆ: ಫಲಪುಷ್ಪ ಪ್ರದರ್ಶನ ವೇಳೆ ಲಾಲ್‌ಬಾಗ್‌ಗೆ ವಾಹನ ಪ್ರವೇಶ ನಿಷೇಧಿಸಲಾಗಿದೆ. ಆದರೆ ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಜೆ.ಸಿ.ರಸ್ತೆಯಿಂದ ಬರುವ ವಾಹನಗಳು ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿ ಇರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ ಮತ್ತು ಲಾಲ್‌ಬಾಗ್ ಮುಖ್ಯ ಪ್ರವೇಶದ್ವಾರ ಮತ್ತು ಜೋಡಿ ರಸ್ತೆ ಪ್ರವೇಶ ದ್ವಾರಗಳ ನಡುವೆ ಇರುವ ಆಲ್ ಅಮೀನ್ ಕಾಲೇಜು ಮೈದಾನದಲ್ಲಿ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಂಗಳೂರು: ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನಕಲಾ ಸಂಘ ಸಹಯೋಗದಲ್ಲಿ ಜ.20ರಂದು ಬೆಳಗ್ಗೆ 11ಕ್ಕೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಶ್‌ಚಂದ್ರ ರೇ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಶಾಸಕ ಆರ್.ವಿ.ದೇವರಾಜ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಬಿಬಿಎಂಪಿ ವಿರೋಧಪಕ್ಷದ ನಾಯಕ ಉದಯ್ ಶಂಕರ್, ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‌ಚಾವ್ಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜ.21ರಂದು ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣಹೂವಿನ ಜೋಡಣೆ, ಥಾಯ್-ಆರ್ಟ್, ಜಾನೂರ್ ಮತ್ತು ಕುಬj ಮರಗಳ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಅಂದು ಮಧ್ಯಾಹ್ನ 1ಕ್ಕೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಕವಯತ್ರಿ ಲತಾರಾಜಶೇಖರ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಲಾಲ್‌ಬಾಗ್ ಅಭಿವೃದ್ಧಿಗೆ ಶ್ರಮಿಸಿದ ಕೃಂಬಿಗಲ್ ಅವರ ಮರಿಮಗಳು ಜರ್ಮನಿಯ ಅಲಿಯಾ ಫೆಲ್ಪ್ ಗಾರ್ಡಿನರ್ ಕೃಂಬಿಗಲ್ ಪಾಲ್ಗೊಳ್ಳಲಿದ್ದಾರೆ ಎಂದರು. ಹೂದೋಟಗಳು, ತರಕಾರಿ ತೋಟ, ತಾರಸಿ ತೋಟಗಳು, ಉದ್ಯಾನವನ ಸ್ಪರ್ಧೆಗಳು, ಗಾಜಿನ ಮನೆಯ ಪ್ರದರ್ಶಿಕೆಗಳು ಹಾಗೂ ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಪ್ರದರ್ಶನ, ಡಚ್ ಹೂವಿನ ಜೋಡಣೆ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜ.25ರಂದು ಮಧ್ಯಾಹ್ನ 3ಕ್ಕೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಜನ್ಮ ಶತಮಾನೋತ್ಸವ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಜ.23ರಂದು ಮಧ್ಯಾಹ್ನ 2ಕ್ಕೆ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ. ಮೈಸೂರು ಮಹಾರಾಜ ಎಚ್.ಎಚ್.ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಹಾರಾಣಿ ಎಚ್.ಎಚ್.ತ್ರಿಷಿಕಾ ಕುಮಾರಿ ಒಡೆಯರ್ ಉದ್ಘಾಟಿಸುವರು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್, ಡಿಸಿಪಿ (ದಕ್ಷಿಣ) ಶರಣಪ್ಪ, ಉಪ ನಿರ್ದೇಶಕ ಚಂದ್ರಶೇಖರ್ ಇದ್ದರು. ಟಿಕೆಟ್ ದರ
ಸಾಮಾನ್ಯ ದಿನಗಳಲ್ಲಿ ದೊಡ್ಡವರಿಗೆ 50 ರೂ. ಹಾಗೂ ರಜಾ ದಿನಗಳಲ್ಲಿ 60 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಕ್ಕಳಿಗೆ 20 ರೂ. ಶುಲ್ಕ ನಿಗದಿ ಮಾಡಲಾಗಿದೆ. ಸರ್ಕಾರ ಮತ್ತು ಖಾಸಗಿ ಶಾಲಾ ಮಕ್ಕಳಿಗೆ 20, 23, 24, 25 ಹಾಗೂ 27ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸ್ವೈಪಿಂಗ್ ಯಂತ್ರ
ನೋಟ್ ಬಂದ್‌ನಿಂದ ಆಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರದರ್ಶನದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸುಮಾರು 9 ಸ್ವೈಪಿಂಗ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕಾರ್ಡುಗಳ ಮೂಲಕವೂ ಗಿಡಗಳನ್ನು ಖರೀದಿ ಮಾಡಬಹುದು. ಹಾಪ್‌ಕಾಮ್ಸ್ ಗಳಲ್ಲೂ ಈ ಯಂತ್ರಗಳಿದ್ದು, ಹಣ್ಣು, ಪಾನಿಯ ಖರೀದಿಗೆ ನೆರವಾಗಲಿದೆ.