Advertisement

ರಾತ್ರಿ ಮನೆಗೆ ಬಾ! ಯುವಕನ ಪರದಾಟ,ಬಂಧನ;ಪೀಣ್ಯದಲ್ಲಿ ನಡೆದಿದ್ದೇನು? 

11:48 AM Jul 12, 2017 | Team Udayavani |

ಬೆಂಗಳೂರು: ಪೀಣ್ಯದಲ್ಲಿ ಒಡಿಶಾ ಮೂಲದ ಯುವತಿಯೊಬ್ಬಳು ಯುವಕನೊಬ್ಬನನ್ನು ಮನೆಗೆ ಕರೆದು ಸಂಬಂಧಿಕರು ಬಂದಾಗ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ಡ್ರಾಮಾ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

Advertisement

ವಾರದಿಂದ ಪರಿಚಯಗೊಂಡಿದ್ದ ಲೇಸರ್‌ ಕಟ್ಟಿಂಗ್‌ ಕಾರ್ಖಾನೆಯ ಉದ್ಯೋಗಿ, ಪೂನಾ ಮೂಲದ ಯುವಕನನ್ನು ತಡರಾತ್ರಿ ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರು ಏಕಾಂತದಲ್ಲಿದ್ದಾಗ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಯುವತಿಯ ಚಿಕ್ಕಮ್ಮ ಬಂದಿದ್ದಾರೆ. 

ದಿಕ್ಕು ತೋಚದ ಯುವತಿ ಈತ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ,ವಾರದಿಂದ ಫಾಲೋ ಮಾಡುತ್ತಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಇಷ್ಟರಲ್ಲಾಗಲೆ ಚಿಕ್ಕಮ್ಮ ಬೊಬ್ಬೆ ಹಾಕಿದ್ದು ನೆರೆ ಹೊರೆಯವರು ಜಮಾಯಿಸಿದ್ದಾರೆ. 

ಯಾವುದಕ್ಕೋ ಬಂದು ಇನ್ನೇನೊ ಆದುದರಿಂದ ಕಂಗಾಲಾದ ಯುವಕ ದಿಕ್ಕು ತೋಚದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಷ್ಟರಲ್ಲಾಗಲೇ ಯುವತಿ ಸಂಬಂಧಿಕರೊಂದಿಗೆ ಠಾಣೆಗೆ ತೆರಳಿ ದೂರನ್ನೂ ನೀಡಿದ್ದಾಳೆ.

ಗಂಭೀರವಾಗಿ ಪರಿಗಣಿಸಿದ ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿಯ ಬಣ್ಣ ಬಯಲಾಗಿದ್ದು , ಆಕೆಯೆ ಮನೆಗೆ ಕರೆದಿದ್ದು, ಸಂಬಂಧಿ ಬಂದಾಗ ನಾಟಕಮಾಡಿದ್ದಾಳೆ ಎಂದಿದ್ದಾನೆ. ಈ ವಿಚಾರವನ್ನು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next